ಅಮೆರಿಕದಲ್ಲಿ ಆಶ್ರಯ ಕೋರಿದ 7,000 ಭಾರತೀಯರು

Update: 2018-06-20 17:10 GMT

ವಿಶ್ವಸಂಸ್ಥೆ, ಜೂ. 20: ಕಳೆದ ವರ್ಷ ಅಮೆರಿಕದಲ್ಲಿ ಆಶ್ರಯ ಕೋರಿ ಭಾರತದಿಂದ 7,000ಕ್ಕೂ ಅಧಿಕ ಮಂದಿ ಅರ್ಜಿ ಹಾಕಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಯ ವರದಿಯೊಂದು ಹೇಳಿದೆ.

2017ರಲ್ಲಿ ಅಮೆರಿಕದಲ್ಲಿ ಆಶ್ರಯ ಕೋರಿ ಹೆಚ್ಚಿನವರು ಅರ್ಜಿಗಳನ್ನು ಹಾಕಿದ್ದಾರೆ ಎಂದು ಅದು ಹೇಳಿದೆ.

2017ರ ಕೊನೆಯ ವೇಳೆಗೆ, ಜಾಗತಿಕವಾಗಿ 6.85 ಕೋಟಿ ಜನರು ನಿರ್ವಸಿತರಾಗಿದ್ದಾರೆ ಎಂದು ವರದಿ ತಿಳಿಸಿದೆ.

ಮಧ್ಯ ಅಮೆರಿಕ ಖಂಡದ ಜನರು ಅಮೆರಿಕದಲ್ಲಿ ಆಶ್ರಯ ಕೋರಿ ಸಲ್ಲಿಸುವ ಅರ್ಜಿಯ ಸಂಖ್ಯೆಯಲ್ಲೂ ಕಳೆದ ವರ್ಷ ಹೆಚ್ಚಾಗಿದೆ. ಈ ಪೈಕಿ ಮೊದಲ ಸ್ಥಾನದಲ್ಲಿರುವ ಸಾಲ್ವಡೋರ್ ರಾಷ್ಟ್ರೀಯರು 49,500 ಅರ್ಜಿಗಳನ್ನು ಸಲ್ಲಿಸಿದ್ದಾರೆ.

10,519 ಮಂದಿಯಿಂದ ಭಾರತದಲ್ಲಿ ಆಶ್ರಯ ಕೋರಿಕೆ

2017ರ ಕೊನೆಯ ಹೊತ್ತಿಗೆ ಭಾರತದಲ್ಲಿ 1,97,146 ಮಂದಿ ನಿರಾಶ್ರಿತರಿದ್ದರು ಹಾಗೂ 10,519 ಮಂದಿ ಹೊಸದಾಗಿ ಆಶ್ರಯ ಕೋರಿ ಅರ್ಜಿ ಸಲ್ಲಿಸಿದ್ದರು ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಯ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News