ಪಾಕ್ ಚುನಾವಣೆಯಲ್ಲಿ ಜೆಯುಡಿಯಿಂದ 265 ಅಭ್ಯರ್ಥಿಗಳು: ಹಫೀಝ್ ಪುತ್ರ, ಅಳಿಯ ಕಣಕ್ಕೆ

Update: 2018-06-21 16:47 GMT

ಲಾಹೋರ್, ಜೂ. 21: ಪಾಕಿಸ್ತಾನದಲ್ಲಿ ನಡೆಯಲಿರುವ ಸಂಸದೀಯ ಮತ್ತು ಪ್ರಾಂತೀಯ ಸಭಾ ಚುನಾವಣೆಯಲ್ಲಿ, ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರ ಹಫೀಝ್ ಸಯೀದ್‌ನ ಜಮಾಅತುದಅವಾ (ಜೆಯುಡಿ) ಸಂಘಟನೆಯು 265 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಈ ಪೈಕಿ ಸಯೀದ್‌ನ ಮಗ ಮತ್ತು ಅಳಿಯ ಸೇರಿದ್ದಾರೆ.

ಆದರೆ, ಸಯೀದ್ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ.

ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದಕ್ಕಾಗಿ ಅಮೆರಿಕವು ಈತನ ತಲೆಗೆ 1 ಕೋಟಿ ಡಾಲರ್ (ಸುಮಾರು 68 ಕೋಟಿ ರೂಪಾಯಿ) ಬಹುಮಾನ ಘೋಷಿಸಿರುವುದನ್ನು ಸ್ಮರಿಸಬಹುದಾಗಿದೆ.

2008ರ ಮುಂಬೈ ಭಯೋತ್ಪಾದಕ ದಾಳಿ ನಡೆಸಿದ ಲಷ್ಕರೆ ತಯ್ಯಬದ ಅಂಗ ಸಂಸ್ಥೆಯಾಗಿರುವ ಜಮಾಅತುದಅವಾ ತನ್ನ ರಾಜಕೀಯ ಘಟಕ ಮಿಲಿ ಮುಸ್ಲಿಮ್ ಲೀಗ್ (ಎಂಎಂಎಲ್)ನ್ನು ಸ್ಥಾಪಿಸಿರುವುದನ್ನು ಸ್ಮರಿಸಬಹುದಾಗಿದೆ.

ಆದರೆ, ಪಾಕಿಸ್ತಾನದ ಚುನಾವಣೆ ಆಯೋಗವು ಇದಕ್ಕೆ ಅನುಮೋದನೆ ನೀಡಿಲ್ಲ.

ಹಾಗಾಗಿ, ಈಗ ಸಕ್ರಿಯವಾಗಿಲ್ಲದ ರಾಜಕೀಯ ಪಕ್ಷ ಅಲ್ಲಾಹು- ಅಕ್ಬರ್ ತೆಹ್ರೀಕ್ (ಎಎಟಿ) ಮೂಲಕ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಹಫೀಝ್ ನಿರ್ಧರಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News