ಟ್ರಂಪ್ ಸರಕಾರದ ನೀತಿ ಮಾನವತೆ ವಿರುದ್ಧದ ಅಪರಾಧ: ಭಾರತ ಮೂಲದ ಸೆನೆಟರ್ ಕಮಲಾ ಹ್ಯಾರಿಸ್

Update: 2018-06-23 16:53 GMT

ವಾಶಿಂಗ್ಟನ್, ಜೂ. 23: ಅಕ್ರಮ ವಲಸಿಗರಿಂದ ಮಕ್ಕಳನ್ನು ಬೇರ್ಪಡಿಸುವ ಟ್ರಂಪ್ ಸರಕಾರದ ನೀತಿಯು ‘ಮಾನವತೆ ವಿರುದ್ಧದ ಅಪರಾಧ’ವಾಗಿದೆ ಎಂದು ಭಾರತ ಮೂಲದ ಸೆನೆಟರ್ ಕಮಲಾ ಹ್ಯಾರಿಸ್ ಹೇಳಿದ್ದಾರೆ.

ಶುಕ್ರವಾರ ಕ್ಯಾಲಿಫೋರ್ನಿಯದ ಸ್ಯಾನ್ ಡೀಗೊ ಸಮೀಪದಲ್ಲಿರುವ ಫೆಡರಲ್ ಜೈಲಿಗೆ ಭೇಟಿ ನೀಡಿ ಮಕ್ಕಳಿಂದ ಬೇರ್ಪಟ್ಟ ತಾಯಂದಿರೊಂದಿಗೆ ಮಾತನಾಡಿದ ಬಳಿಕ, ಕಮಲಾ ಹ್ಯಾರಿಸನ್ ಈ ಹೇಳಿಕೆ ನೀಡಿದ್ದಾರೆ.

ಬೇರ್ಪಟ್ಟ ಕುಟುಂಬ ಸದಸ್ಯರನ್ನು ತಕ್ಷಣ ಒಂದುಗೂಡಿಸುವಂತೆ ಅವರು ಟ್ರಂಪ್ ಸರಕಾರವನ್ನು ಒತ್ತಾಯಿಸಿದ್ದಾರೆ.

‘‘ಮಕ್ಕಳಿಂದ ಬೇರ್ಪಟ್ಟ ತಾಯಂದಿರೊಂದಿಗೆ ನಾನು ಮಾತನಾಡಿದೆ. ತಾವು ಏಕಾಂಗಿ ಎಂಬ ಭಾವನೆ ಅವರಲ್ಲಿದೆ. ನೀವು ಏಕಾಂಗಿಯಲ್ಲ, ನಿಮ್ಮೊಂದಿಗೆ ನಾವಿದ್ದೇವೆ ಎಂಬುದನ್ನು ನಾವು ಅವರಿಗೆ ಜ್ಞಾಪಿಸಬೇಕಾಗಿದೆ’’ ಎಂದು ಅವರು ಹೇಳಿದರು.

‘‘ಇದು ಆಘಾತಕಾರಿ. ಇದು ಅಮೆರಿಕ ಸರಕಾರ ಮಾಡುತ್ತಿರುವ ಮಾನವತೆ ವಿರುದ್ಧದ ಅಪರಾಧ. ಇದನ್ನು ನಾವು ನಿಲ್ಲಿಸಬೇಕಾಗಿದೆ’’ ಎಂದು ಜೈಲಿನ ಹೊರಗೆ ಸೇರಿದ ಹಲವು ನೂರು ಮಂದಿಯನ್ನು ಉದ್ದೇಶಿಸಿ ಮಾತನಾಡಿದ ಕಮಲಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News