ಜನಾಂಗೀಯ ನಿಂದನೆ: ನೆಟ್‌ಫ್ಲಿಕ್ಸ್ ವಕ್ತಾರ ಉಚ್ಚಾಟನೆ

Update: 2018-06-23 17:00 GMT

ವಾಶಿಂಗ್ಟನ್, ಜೂ. 23: ಕೆಲಸದ ವೇಳೆ ಜನಾಂಗೀಯ ನಿಂದನೆಗೈದ ನೆಟ್‌ಫ್ಲಿಕ್ಸ್ ಇಂಕ್‌ನ ಪ್ರಧಾನ ವಕ್ತಾರ ಜೊನಾಥನ್ ಫೈಡ್‌ಲ್ಯಾಂಡ್‌ರನ್ನು ಉಚ್ಚಾಟಿಸಲಾಗಿದೆ.

ಸಹೋದ್ಯೋಗಿಗಳ ಬಗ್ಗೆ ‘ಸಂವೇದನಾರಹಿತ’ ಹೇಳಿಕೆಗಳನ್ನು ನೀಡಿದ ಹಿನ್ನೆಲೆಯಲ್ಲಿ ತಾನು ಕಂಪೆನಿಯಿಂದ ಹೊರಹೋಗುತ್ತಿದ್ದೇನೆ ಎಂದು ಮುಖ್ಯ ಸಂಪರ್ಕ ಅಧಿಕಾರಿಯಾಗಿರುವ ಜೊನಾಥನ್ ಶುಕ್ರವಾರ ಟ್ವಿಟರ್‌ನಲ್ಲಿ ಹೇಳಿದ್ದಾರೆ.

ಅವರು ಕಳೆದ ವರ್ಷ ಕಪ್ಪು ವರ್ಣೀಯರನ್ನು ಸಂಭೋಧಿಸಲು ನಿಂದನಾತ್ಮಕ ಪದವೊಂದನ್ನು ಎರಡು ಬಾರಿ ಬಳಸಿದ್ದಾರೆ ಎಂದು ‘ಬ್ಲೂಮ್‌ಬರ್ಗ್’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News