ವಿದೇಶಿಯರ ಇಬಿ-5 ವೀಸಾ ಮೇಲೆ ಟ್ರಂಪ್ ಆಡಳಿತದ ಕಣ್ಣು

Update: 2018-06-23 17:02 GMT

ವಾಶಿಂಗ್ಟನ್, ಜೂ. 23: ಇಬಿ-5 ಇನ್‌ವೆಸ್ಟರ್ಸ್ ವೀಸಾ ಕಾರ್ಯಕ್ರಮವನ್ನು ಒಂದೋ ಮಾರ್ಪಡಿಸಿ ಅಥವಾ ರದ್ದುಪಡಿಸಿ ಎಂದು ಟ್ರಂಪ್ ಆಡಳಿತ ಅಮೆರಿಕ ಕಾಂಗ್ರೆಸ್ಸನ್ನು ಒತ್ತಾಯಿಸಿದೆ.

ಅಮೆರಿಕದಲ್ಲಿ ಸುಮಾರು 10 ಜನರಿಗೆ ಖಾಯಂ ಪೂರ್ಣಕಾಲಿಕ ಕೆಲಸ ಒದಗಿಸುವ ನಿಟ್ಟಿನಲ್ಲಿ ಕನಿಷ್ಠ 1 ಮಿಲಿಯ ಡಾಲರ್ (ಸುಮಾರು 6.78 ಕೋಟಿ ರೂಪಾಯಿ) ಹೂಡಿಕೆ ಮಾಡುವ ವಿದೇಶಿಯರಿಗೆ ಈ ಕಾರ್ಯಕ್ರಮವು ಗ್ರೀನ್ ಕಾರ್ಡ್ (ಅಮೆರಿಕ ಪೌರತ್ವ) ನೀಡುತ್ತದೆ.

ಈ ಕಾರ್ಯಕ್ರಮವನ್ನು ವಿದೇಶಿಯರು ದುರುಪಯೋಗಪಡಿಸಿಕೊಳ್ಳುತ್ತಿರುವ ಬಗ್ಗೆ ವರದಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಟ್ರಂಪ್ ಆಡಳಿತ ಈ ಕ್ರಮಕ್ಕೆ ಮುಂದಾಗಿದೆ.

ಇಬಿ-5 ಹೂಡಿಕೆದಾರರ ವೀಸಾ ಕಾರ್ಯಕ್ರಮವನ್ನು ಅಮೆರಿಕದ ಪ್ರಮುಖ ಸಂಸದರೂ ವಿರೋಧಿಸುತ್ತಿದ್ದಾರೆ. ಈ ಕಾರ್ಯಕ್ರಮವು ವಂಚನೆ ಮತ್ತು ದುರುಪಯೋಗ ಪ್ರಕರಣಗಳಿಗೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

‘‘ಇಬಿ-5 ರೀಜನಲ್ ಸೆಂಟರ್ ಪ್ರೋಗ್ರಾಮ್ ಅವಧಿ ಸೆಪ್ಟಂಬರ್ 30ರಂದು ಮುಕ್ತಾಯಗೊಳ್ಳಲಿದೆ. ವಂಚನೆ, ದುರುಪಯೋಗ ಮತ್ತು ಅವ್ಯವಹಾರಗಳಿಂದ ಅಮೆರಿಕದ ಹೂಡಿಕೆದಾರರು, ಉದ್ಯಮಿಗಳು ಮತ್ತು ಜನರನ್ನು ರಕ್ಷಿಸಲು ಅದರಲ್ಲಿ ಮಾರ್ಪಾಡುಗಳನ್ನು ತರುವುದು ಅಗತ್ಯವಾಗಿದೆ’’ ಎಂದು ಕಾಂಗ್ರೆಸ್ ವಿಚಾರಣೆಯ ವೇಳೆ ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News