ಭಾರತ, ಚೀನಾ ಜೊತೆಗೆ ಉತ್ತಮ ಸಂಬಂಧ: ನೇಪಾಳ ಪ್ರಧಾನಿ ಕೆ.ಪಿ. ಒಲಿ

Update: 2018-06-23 17:26 GMT

ಬೀಜಿಂಗ್, ಜೂ. 23: ನೇಪಾಳವು ಭಾರತ ಮತ್ತು ಚೀನಾಗಳ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸಬಹುದಾಗಿದೆ ಎಂದು ನೇಪಾಳ ಪ್ರಧಾನಿ ಕೆ.ಪಿ. ಒಲಿ ಹೇಳಿದ್ದಾರೆ.

ತನ್ನ ದೇಶವು ಸ್ವತಂತ್ರ ವಿದೇಶ ನೀತಿಯನ್ನು ಅನುಸರಿಸುತ್ತಾ ಎರಡು ನೆರೆ ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಲಿದೆ ಎಂದು ಐದು ದಿನಗಳ ಚೀನಾ ಭೇಟಿಯಲ್ಲಿರುವ ಅವರು ಹೇಳಿದ್ದಾರೆ.

ಒಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಪ್ರಧಾನಿ ಲಿ ಕೆಕಿಯಂಗ್ ಜೊತೆ ಮಾತುಕತೆಗಳನ್ನು ನಡೆಸಿದರು. ಆ ಬಳಿಕ ಟಿಬೆಟ್ ಮತ್ತು ಕಠ್ಮಂಡುಗಳನ್ನು ಸಂಪರ್ಕಿಸುವ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದ ತಿಳುವಳಿಕೆ ಪತ್ರವೊಂದಕ್ಕೆ ಸಹಿ ಹಾಕಲಾಯಿತು.

ಇದೇ ಸಂದರ್ಭದಲ್ಲಿ ಚೀನಾದ ಸರಕಾರಿ ಒಡೆತನದ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ಗೆ ಸಂದರ್ಶನ ನೀಡಿದ ಒಲಿ, ತನ್ನ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ, ಉಭಯ ನೆರೆ ದೇಶಗಳೊಂದಿಗಿನ ಸಂಪರ್ಕಗಳನ್ನು ಹೆಚ್ಚಿಸಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News