ಇಥಿಯೋಪಿಯ: ಪ್ರಧಾನಿ ಸಭೆಯಲ್ಲಿ ಸ್ಫೋಟ; ಹಲವಾರು ಸಾವು

Update: 2018-06-23 17:29 GMT

ಅಡಿಸ್ ಅಬಾಬ (ಇಥಿಯೋಪಿಯ), ಜೂ. 23: ಇಥಿಯೋಪಿಯದ ನೂತನ ಪ್ರಧಾನಿ ಅಬಿಯ್ ಅಹ್ಮದ್ ರಾಜಧಾನಿ ಅಡಿಸ್ ಅಬಾಬದಲ್ಲಿ ನಡೆಸಿದ ಬೃಹತ್ ಸಭೆಯ ವೇಳೆ ಸ್ಫೋಟವೊಂದು ಸಂಭವಿಸಿ ಹಲವಾರು ಮಂದಿ ಮೃತಪಟ್ಟಿದ್ದಾರೆ ಹಾಗೂ ಗಾಯಗೊಂಡಿದ್ದಾರೆ.

ಎಪ್ರಿಲ್‌ನಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿರುವ 41 ವರ್ಷದ ಮಾಜಿ ಸೈನಿಕ ಅಹ್ಮದ್‌ಗೆ ಬೆಂಬಲ ಸೂಚಿಸಿ ಸಭೆ ಏರ್ಪಡಿಸಲಾಗಿತ್ತು.

‘‘ಸ್ಫೋಟದಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ ಹಾಗೂ ಅವರ ಪೈಕಿ ಹಲವರು ಮೃತಪಟ್ಟಿದ್ದಾರೆ’’ ಎಂದು ಸ್ಫೋಟದ ಬಳಿಕ ದೇಶವನ್ನುದ್ದೇಶಿಸಿ ಟೆಲಿವಿಶನ್‌ನಲ್ಲಿ ಮಾಡಿದ ಭಾಷಣದಲ್ಲಿ ಪ್ರಧಾನಿ ಹೇಳಿದರು.

ಅಡಿಸ್ ಅಬಾಬದ ಮೆಸ್ಕೆಲ್ ಚೌಕದಲ್ಲಿ ಅವರ ಭಾಷಣ ಮುಗಿದ ಕೆಲವು ನಿಮಿಷಗಳ ಬಳಿಕ ಸ್ಫೋಟ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News