ವಿಶ್ವಕಪ್ ಬಿಲ್ಲುಗಾರಿಕೆ: ಬೆಳ್ಳಿ ಹಾಗೂ ಕಂಚು ಗೆದ್ದ ಅಭಿಷೇಕ್, ಎರಡು ಪದಕಗಳತ್ತ ದೀಪಿಕಾ ದೃಷ್ಟಿ

Update: 2018-06-24 14:28 GMT

ಸಾಲ್ಟ್‌ಲೇಕ್ ಸಿಟಿ, ಜೂ.24: ಇಲ್ಲಿ ನಡೆಯುತ್ತಿರುವ ವಿಶ್ವಕಪ್ ಬಿಲ್ಲುಗಾರಿಕೆ ಕ್ರೀಡಾಕೂಟದಲ್ಲಿ ಭಾರತದ ಬಿಲ್ಲುಗಾರ ಅಭಿಷೇಕ್ ವರ್ಮಾ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಹಾಗೂ ಮಿಶ್ರ ತಂಡದಲ್ಲಿ ಕಂಚು ಗೆದ್ದುಕೊಂಡಿದ್ದಾರೆ. ಚಿನ್ನ ಗೆಲ್ಲುವ ಅಭಿಷೇಕ್ ಕನಸನ್ನು ಡೆನ್ಮಾರ್ಕ್‌ನ ಸ್ಟೀವನ್ ಹಂಸೆನ್ ಭಗ್ನಗೊಳಿಸಿದ ನಂತರ ಅಭಿಷೇಕ್ ಬೆಳ್ಳಿಗೆ ತೃಪ್ತಿಪಡಬೇಕಾಯಿತು. ಶನಿವಾರ ನಡೆದ ಉಪಾಂತ್ಯದಲ್ಲಿ 150 ಅಂಕಗಳನ್ನು ಪಡೆಯುವ ಮೂಲಕ ರಷ್ಯಾದ ಆಂಟನ್ ಬುಲೆವ್ ವಿರುದ್ಧ ಜಯ ಸಾಧಿಸಿದ್ದರು. ಕಾಕತಾಳೀಯವೆಂಬಂತೆ ಶನಿವಾರ ಅಭಿಷೇಕ್‌ರ 28ನೇ ಹುಟ್ಟುಹಬ್ಬವೂ ಆಗಿತ್ತು. ನಿರ್ಣಾಯಕ ಪಂದ್ಯದಲ್ಲಿ 2015ರ ವಿಶ್ವ ಚಾಂಪಿಯನ್ ಹಾಗೂ 2017ರ ವಿಶ್ವ ಬೆಳ್ಳಿ ಪದಕ ವಿಜೇತ ಸ್ಟೀವನ್ ಹಂಸೆನ್ ವಿರುದ್ಧ ಅಭಿಷೇಕ್ ಚಿನ್ನದ ಪದಕದತ್ತ ಗುರಿಯಿಡುವಲ್ಲಿ ವಿಫಲವಾದರು. ಏಕಮುಖವಾಗಿ ಸಾಗಿದ ಹೋರಾಟವು ಅಂತಿಮವಾಗಿ 123-140 ಅಂಕಗಳಲ್ಲಿ ಕೊನೆಯಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News