ವಿಶ್ವಕಪ್: ಜಪಾನ್-ಸೆನೆಗಲ್ ಪಂದ್ಯ 2-2 ಡ್ರಾ

Update: 2018-06-24 17:31 GMT

 ಎಕಟೆರಿನ್‌ಬರ್ಗ್, ಜೂ.24: ವಿಶ್ವಕಪ್‌ನ ‘ಎಚ್’ ಗುಂಪಿನ ಪಂದ್ಯದಲ್ಲಿ ಎರಡು ಬಾರಿ ಹಿನ್ನಡೆಯಿಂದ ಚೇತರಿಸಿಕೊಂಡ ಜಪಾನ್ ತಂಡ ಸೆನಗಲ್ ವಿರುದ್ಧ 2-2 ರಿಂದ ಡ್ರಾ ಮಾಡಿಕೊಂಡಿದೆ. ರವಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಸೆನೆಗಲ್ ನಾಯಕ ಸಾಡಿಯೊ ಮಾನೆ 11ನೇ ನಿಮಿಷದಲ್ಲಿ ಗೋಲು ದಾಖಲಿಸಿ 1-0 ಮುನ್ನಡೆ ಒದಗಿಸಿಕೊಟ್ಟರು. 34ನೇ ನಿಮಿಷದಲ್ಲಿ ಗೋಲು ಬಾರಿಸಿದ ಜಪಾನ್‌ನ ತಕಾಶಿ ಇನ್‌ಯು ಸ್ಕೋರನ್ನು 1-1ರಿಂದ ಸಮಬಲಗೊಳಿಸಿದರು.

ಮೊದಲಾರ್ಧದಲ್ಲಿ ಉಭಯ ತಂಡಗಳು ತಲಾ ಒಂದು ಗೋಲು ಬಾರಿಸಿದ್ದವು. ದ್ವಿತೀಯಾರ್ಧದ 71ನೇ ನಿಮಿಷದಲ್ಲಿ ಗೋಲು ಬಾರಿಸಿದ ವೌಸಾ ವಾಗ್ ಸೆನಗಲ್‌ಗೆ 2-1 ಮುನ್ನಡೆ ಒದಗಿಸಿಕೊಟ್ಟರು. ಆದರೆ, 78ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಜಪಾನ್‌ನ ಕೆಸುಕೆ ಹೊಂಡಾ ಪಂದ್ಯ 2-2 ರಿಂದ ಡ್ರಾಗೊಳ್ಳಲು ಪ್ರಮುಖ ಪಾತ್ರವಹಿಸಿದರು.

ಜಪಾನ್ ತನ್ನ ಮೊದಲ ಪಂದ್ಯದಲ್ಲಿ ಕೊಲಂಬಿಯಾವನ್ನು 2-1 ರಿಂದ ಸೋಲಿಸಿ ಶುಭಾರಂಭ ಮಾಡಿತ್ತು. ಸೆನೆಗಲ್ ತಂಡ ತಾನಾಡಿದ ಮೊದಲ ಪಂದ್ಯದಲ್ಲಿ ಪೊಲೆಂಡ್‌ನ್ನು 2-1 ಗೋಲುಗಳಿಂದ ಸೋಲಿಸಿ ಉತ್ತಮ ಆರಂಭ ಪಡೆದಿತ್ತು.

ಕಳಪೆ ಆರಂಭ ಪಡೆದಿದ್ದ ಜಪಾನ್ ಆನಂತರ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿತು. ಕಳಪೆ ಡಿಫೆನ್ಸ್‌ನಿಂದಾಗಿ ಮೊದಲ ಗೋಲನ್ನು ಬಿಟ್ಟುಕೊಟ್ಟಿದ್ದ ಜಪಾನ್ ಹಲವು ಅವಕಾಶವನ್ನು ಕಳೆದುಕೊಂಡಿತು. ಅಂತಿಮವಾಗಿ ಡ್ರಾ ಸಾಧಿಸುವ ಮೂಲಕ ನಿಟ್ಟುಸಿರು ಬಿಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News