×
Ad

ಫಿಫಾ ವಿಶ್ವಕಪ್: ಉರುಗ್ವೆ , ಸೌದಿ ಅರೇಬಿಯಾಕ್ಕೆ ಜಯ

Update: 2018-06-25 21:58 IST

ಸಮರಾ, ಜೂ.25: ಫಿಫಾ ವಿಶ್ವಕಪ್ ‘ಎ’ ಗುಂಪಿನ ಪಂದ್ಯಗಳಲ್ಲಿ ಉರುಗ್ವೆ ಮತ್ತು ಸೌದಿ ಅರೇಬಿಯಾ ಜಯ ಗಳಿಸಿವೆ.
ಸಮರದಲ್ಲಿ ನಡೆದ ಪಂದ್ಯದಲ್ಲಿ ರಶ್ಯ ವಿರುದ್ಧ ಉರುಗ್ವೆ 3-0 ಅಂತರದಿಂದ ಜಯ ಗಳಿಸಿತು.
ಉರುಗ್ವೆ ತಂಡದ ಲೂಯಿಸ್ ಸುಯರೆಝ್ (10ನೇ ನಿ.) ಮತ್ತು  ಎಡ್ಸನ್ ಕವಾನಿ(90 ನಿ.) ಗೋಲು ದಾಖಲಿದರು. ರಶ್ಯದ ಡೆನ್ನಿಸ್ ಚೆರಿಶೇವ್(23ನೇ ನಿ.)  ಉರುಗ್ವೆಗೆ ಸೆಲ್ಫ್ ಗೋಲು ಕೊಡುಗೆ ನೀಡಿದರು.

ಇನ್ನೊಂದು ಪಂದ್ಯದಲ್ಲಿ ಈಜಿಪ್ಟ್‌ನ್ನು ಸೌದಿ ಅರೇಬಿಯಾ 2-1 ಅಂತರದಲ್ಲಿ ಮಣಿಸಿತು. ಸೌದಿ ಅರೇಬಿಯಾದ ಸಲ್ಮಾನ್ ಅಲ್ ಫರಾಜ್(45+6) ಮತ್ತು ಸಲೀಮ್ ಅಲ್  ಡಾವ್ಸಾರಿ (90+4) ಗೋಲು ದಾಖಲಿಸಿದರು. ಈಜಿಪ್ಟ್‌ನ ಮುಹಮ್ಮದ್ ಸಲಾಹ್(22ನೇ ನಿ.) ಏಕೈಕ ಗೋಲು ಜಮೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News