×
Ad

ಫಿಫಾ ವಿಶ್ವಕಪ್‌: ಜಪಾನ್, ಕೊಲಂಬಿಯಾ ಪ್ರಿ ಕ್ವಾರ್ಟರ್ ಫೈನಲ್‌ಗೆ

Update: 2018-06-28 21:46 IST

ಮಾಸ್ಕೊ, ಜೂ.28: ಫಿಫಾ ವಿಶ್ವಕಪ್‌ನ ‘ಎಚ್’ ಗುಂಪಿನಲ್ಲಿ ಜಪಾನ್ ಮತ್ತು ಕೊಲಂಬಿಯಾ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
 ಗುರುವಾರ ನಡೆದ ಕೊನೆಯ ಪಂದ್ಯಗಳಲ್ಲಿ ಸೆನಗಲ್ ವಿರುದ್ಧ 1-0 ಅಂತರದಲ್ಲಿ ಜಯ ಗಳಿಸಿದ ಕೊಲಂಬಿಯಾ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಕೊಲಂಬಿಯಾ ಪರ ಎರ್ರಿ ಮಿನಾ (74ನೇ ನಿ) ಗೋಲು ದಾಖಲಿಸಿದರು.
ಇನ್ನೊಂದು ಪಂದ್ಯದಲ್ಲಿ ಪೊಲೆಂಡ್ ವಿರುದ್ಧ ಜಪಾನ್ 0-1 ಅಂತರದಲ್ಲಿ ಸೋಲು ಅನುಭವಿಸಿತು. ಪೊಲೆಂಡ್‌ನ ಜಾನ್ ಬೆಡ್ನಾರೆರ್( 59ನೇ ನಿ.) ಗೋಲು ಗಳಿಸಿದರು.
 ಜಪಾನ್ ಸೋತರೂ 3 ಪಂದ್ಯಗಳಲ್ಲಿ 4 ಪಾಯಿಂಟ್ಸ್ ಪಡೆದು 16ರ ಘಟ್ಟಕ್ಕೆ ತೇರ್ಗಡೆಯಾಗಿದೆ. ಕೊಲಂಬಿಯಾ 3ಪಂದ್ಯಗಳಲ್ಲಿ 2ನೇ ಗೆಲುವು ದಾಖಲಿಸಿ 6 ಪಾಯಿಂಟ್ಸ್ ಪಡೆದು ಅಗ್ರಸ್ಥಾನದೊಂದಿಗೆ ಮುಂದಿನ ಹಂತಕ್ಕೆ ತೇರ್ಗಡೆಯಾಗಿದೆ.
,,,,,,,,,,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News