ಮಹಿಳಾ ಹಾಕಿ ವಿಶ್ವಕಪ್: ರಾಣಿ ರಾಂಪಾಲ್ ಭಾರತದ ನಾಯಕಿ

Update: 2018-06-29 10:31 GMT

ಹೊಸದಿಲ್ಲಿ, ಜೂ.29: ಮುಂದಿನ ತಿಂಗಳು ಲಂಡನ್‌ನಲ್ಲಿ ನಡೆಯುವ ಮಹಿಳಾ ಹಾಕಿ ವಿಶ್ವಕಪ್‌ನಲ್ಲಿ ಆಡಲಿರುವ 18 ಸದಸ್ಯೆಯರನ್ನು ಒಳಗೊಂಡ ಭಾರತ ತಂಡದ ನಾಯಕಿಯಾಗಿ ಫಾರ್ವರ್ಡ್ ಆಟಗಾರ್ತಿ ರಾಣಿ ರಾಂಪಾಲ್ ಆಯ್ಕೆಯಾಗಿದ್ದಾರೆ.

 ಜು.21 ರಿಂದ ಆರಂಭವಾಗಲಿರುವ ಪ್ರತಿಷ್ಠಿತ ಟೂರ್ನಮೆಂಟ್‌ಗೆ ಹಾಕಿ ಇಂಡಿಯಾ ಶುಕ್ರವಾರ ಭಾರತ ಮಹಿಳಾ ತಂಡವನ್ನು ಆಯ್ಕೆ ಮಾಡಿದೆ.

 ಭಾರತ ತಂಡ ‘ಬಿ’ ಗುಂಪಿನಲ್ಲಿ ಆತಿಥೇಯ , ವಿಶ್ವದ ನಂ.2ನೇ ತಂಡ ಇಂಗ್ಲೆಂಡ್, ವಿಶ್ವದ ನಂ.7ನೇ ತಂಡ ಅಮೆರಿಕ ಹಾಗೂ ವಿಶ್ವದ ನಂ.16ನೇ ತಂಡ ಐರ್ಲೆಂಡ್‌ನೊಂದಿಗೆ ಸ್ಥಾನ ಪಡೆದಿದೆ.

ಅನುಭವಿ ಆಟಗಾರ್ತಿ ರಾಣಿ ತಂಡವನ್ನು ನಾಯಕಿಯಾಗಿ ಮುನ್ನಡೆಸಲಿದ್ದಾರೆ. ಗೋಲ್‌ಕೀಪರ್ ಸವಿತಾ ಉಪ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸ್ಪೇನ್ ಪ್ರವಾಸದಲ್ಲಿ ವಿಶ್ರಾಂತಿ ಪಡೆದಿದ್ದ ಗೋಲ್‌ಕೀಪರ್ ರಜನಿ ಎತಿಮುರ್ಪು ತಂಡಕ್ಕೆ ವಾಪಸಾಗಿದ್ದಾರೆ.

ಭಾರತದ ಮಹಿಳಾ ಹಾಕಿ ತಂಡ

 ಗೋಲ್‌ಕೀಪರ್‌ಗಳು: ಸವಿತಾ(ಉಪ-ನಾಯಕಿ), ರಜನಿ

ಡಿಫೆಂಡರ್‌ಗಳು: ಸುನಿತಾ ಲಾಕ್ರಾ, ದೀಪ್ ಗ್ರೆಸ್ ಎಕ್ಕಾ, ದೀಪಿಕಾ, ಗುರ್ಜಿತ್ ಕೌರ್, ರೀನಾ ಖೋಖರ್.

ಮಿಡ್ ಫೀಲ್ಡರ್‌ಗಳು: ನಮಿತಾ ಟೊಪ್ಪೊ, ಲಿಲಿಮಾ ಮಿಂಝ್, ಮೋನಿಕಾ, ನೇಹಾ ಗೋಯಲ್, ನವಜೋತ್ ಕೌರ್, ನಿಕ್ಕಿ ಪ್ರಧಾನ್.

ಫಾರ್ವರ್ಡ್‌ಗಳು: ರಾಣಿ(ನಾಯಕಿ), ವಂದನಾ ಕಟಾರಿಯ, ನವನೀತ್ ಕೌರ್, ಲಾಲ್‌ರೆಂಸಿಯಾಮಿ, ಉದಿತಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News