×
Ad

ದ್ವಿತೀಯ ಟ್ವೆಂಟಿ-20 ಪಂದ್ಯ : ಭಾರತ 213/4

Update: 2018-06-29 22:23 IST
 ಲೋಕೇಶ್ ರಾಹುಲ್ 70 ರನ್(36ಎ, 3ಬೌ,6ಸಿ) ಮತ್ತು ಸುರೇಶ್ ರೈನಾ 69 ರನ್(45ಎ, 5ಬೌ,3ಸಿ) 

ಡಬ್ಲಿನ್, ಜೂ.29: ಐರ್ಲೆಂಡ್ ವಿರುದ್ಧದ ದ್ವಿತೀಯ ಟ್ವೆಂಟಿ-20 ಪಂದ್ಯದಲ್ಲಿ ಭಾರತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 213 ರನ್ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಟೀಮ್ ಇಂಡಿಯಾ ಪರ ಆರಂಭಿಕ ದಾಂಡಿಗ ಲೋಕೇಶ್ ರಾಹುಲ್ 70 ರನ್(36ಎ, 3ಬೌ,6ಸಿ) ಮತ್ತು ಸುರೇಶ್ ರೈನಾ 69 ರನ್(45ಎ, 5ಬೌ,3ಸಿ) ದಾಖಲಿಸಿ ಐರ್ಲೆಂಡ್‌ಗೆ ಕಠಿಣ ಸವಾಲು ವಿಧಿಸಲು ನೆರವಾದರು.
ಮನೀಶ್ ಪಾಂಡೆ ಔಟಾಗದೆ 21 ರನ್, ಹಾರ್ದಿಕ್ ಪಾಂಡ್ಯ ಔಟಾಗದೆ 32 ರನ್(9ಎ, 1ಬೌ,4ಸಿ) , ನಾಯಕ ವಿರಾಟ್ ಕೊಹ್ಲಿ 9ರನ್ ಗಳಿಸಿದರು. ರೋಹಿತ್ ಶರ್ಮಾ (0) ಖಾತೆ ತೆರೆಯದೆ ನಿರ್ಗಮಿಸಿದರು.

ಐರ್ಲೆಂಡ್ ತಂಡದ ಕೆವಿನ್ ಒ ಬ್ರಿಯನ್ 40ಕ್ಕೆ 3 ವಿಕೆಟ್ ಪಡೆದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News