ಜಿಮ್ನಾಸ್ಟಿಕ್ಸ್ ವರ್ಲ್ಡ್ ಚಾಲೆಂಜ್ ಕಪ್‌ನಲ್ಲಿ ಚಿನ್ನ ಗೆದ್ದ ದೀಪಾ ಕರ್ಮಾಕರ್
Update: 2018-07-08 19:33 IST
ಹೊಸದಿಲ್ಲಿ, ಜು.8: ಟರ್ಕಿಯ ಮೆರ್ಸಿನ್‌ನಲ್ಲಿ ನಡೆದ ಜಿಮ್ನಾಸ್ಟಿಕ್ಸ್ ವರ್ಲ್ಡ್ ಚಾಲೆಂಜ್ ಕಪ್‌ನ ವೋಲ್ಟ್ ಇವೆಂಟ್‌ನಲ್ಲಿ ಭಾರತದ ದೀಪಾ ಕರ್ಮಾಕರ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
2016ರ ರಿಯೋ ಒಲಿಂಪಿಕ್ಸ್‌ನಲ್ಲಿ ವೋಲ್ಟ್ ಇವೆಂಟ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ದೀಪಾ 14.150 ಸ್ಕೋರ್ ಗಳಿಸಿ ಚಿನ್ನದ ಪದಕ ಜಯಿಸಿದರು. ಗಾಯದ ಸಮಸ್ಯೆಯಿಂಂದಾಗಿ ದೀಪಾ ಎರಡು ವರ್ಷಗಳ ಕಾಲ ಸಕ್ರಿಯ ಕ್ರೀಡೆಯಿಂದ ದೂರ ಉಳಿದಿದ್ದರು.
ಅರ್ಹತಾ ಸುತ್ತಿನಲ್ಲಿ 13.400 ಅಂಕ ಗಳಿಸಿ ಅಗ್ರ ಸ್ಥಾನ ಪಡೆದಿದ್ದ ದೀಪಾ ಮೊದಲ ಬಾರಿ ವರ್ಲ್ಡ್ ಚಾಲೆಂಜ್ ಕಪ್‌ನಲ್ಲಿ ಪದಕ ಜಯಿಸಿದ್ದಾರೆ.
ದೀಪಾ ಗಾಯದ ಸಮಸ್ಯೆ ಕಾರಣ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹೊರಗುಳಿದಿದ್ದು ಮುಂಬರುವ ಏಶ್ಯನ್ ಗೇಮ್ಸ್‌ನಲ್ಲಿ 10 ಸದಸ್ಯರ ಭಾರತದ ಜಿಮ್ನಾಸ್ಟಿಕ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.