3ನೇ ಟ್ವೆಂಟಿ-20: ಭಾರತಕ್ಕೆ 199 ರನ್‌ಗಳ ಸವಾಲು
Update: 2018-07-08 21:12 IST
ಬ್ರಿಸ್ಟಲ್, ಜು.8: ಮೂರನೇ ಟ್ವೆಂಟಿ-20 ಪಂದ್ಯದಲ್ಲಿ ಭಾರತ ವಿರುದ್ಧ ಇಂಗ್ಲೆಂಡ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 198 ರನ್ ಗಳಿಸಿದೆ.
ಕೌಂಟಿ ಕ್ರೀಡಾಂಗಣದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್ ತಂಡದ ಪರ ಆರಂಭಿಕ ದಾಂಡಿಗ ಜೇಸನ್ ರಾಯ್ (67) ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದರು.
ವಿಕೆಟ್ ಕೀಪರ್ ಜೋಸ್ ಬಟ್ಲರ್(34), ಅಲೆಕ್ಸ್ ಹೇಲ್ಸ್(30), ಬೆನ್ ಸ್ಟೋಕ್ಸ್(14) ಮತ್ತು ಜೋನಿ ಬೈರ್‌ಸ್ಟೋವ್(25) ಎರಡಂಕೆಯ ರನ್ ಗಳಿಸಿದರು.
ಭಾರತದ ಪರ ಹಾರ್ದಿಕ್ ಪಾಂಡ್ಯ 38ಕ್ಕೆ 4, ಸಿದ್ದಾರ್ಥ ಕೌಲ್ 35ಕ್ಕೆ 2, ದೀಪಕ್ ಚಹಾರ್ ಮತ್ತು ಉಮೇಶ್ ಯಾದವ್ ತಲಾ 1 ವಿಕೆಟ್ ಪಡೆದರು.