×
Ad

ರೋಹಿತ್ ಶತಕ: ಭಾರತಕ್ಕೆ ಮೂರನೇ ಟ್ವೆಂಟಿ-20 ಪಂದ್ಯದಲ್ಲಿ ಜಯ

Update: 2018-07-08 22:16 IST

 ಬ್ರಿಸ್ಟಲ್, ಜು.8: ಇಂಗ್ಲೆಂಡ್ ವಿರುದ್ಧದ ಮೂರನೇ ಟ್ವೆಂಟಿ-20 ಪಂದ್ಯದಲ್ಲಿ ಭಾರತ ರೋಹಿತ್ ಶರ್ಮ ಶತಕದ ಶತಕದ ನೆರವಿನಲ್ಲಿ 7 ವಿಕೆಟ್‌ಗಳ ಜಯ ಗಳಿಸಿದೆ.
 ರವಿವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 199 ರನ್‌ಗಳ ಸವಾಲನ್ನು ಪಡೆದ ಭಾರತ ಇನ್ನೂ 8 ಎಸೆತಗಳು ಬಾಕಿ ಇರುವಾಗಲೇ 3 ವಿಕೆಟ್ ನಷ್ಟದಲ್ಲಿ 201 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಇದರೊಂದಿಗೆ ಭಾರತ 3 ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡಿದೆ.
  ರೋಹಿತ್ ಶರ್ಮ ಶತಕ ದಾಖಲಿಸಿ ಔಟಾಗದೆ ಉಳಿದರು. ಶರ್ಮ 56 ಎಸೆತಗಳಲ್ಲಿ 11 ಬೌಂಡರಿ ಮತ್ತು 5 ಸಿಕ್ಸರ್ ನೆರವಿನಲ್ಲಿ 3ನೇ ಶತಕ ದಾಖಲಿಸಿದರು.
ವಿರಾಟ್ ಕೊಹ್ಲಿ 43 ರನ್, ಹಾರ್ದಿಕ್ ಪಾಂಡ್ಯ ಔಟಾಗದೆ 33ರನ್ , ಲೋಕೇಶ್ ರಾಹುಲ್ 19ರನ್, ಶಿಖರ್ ಧವನ್ 5 ರನ್ ಗಳಿಸಿ ಔಟಾದರು.
ಇಂಗ್ಲೆಂಡ್‌ನ ವಿಲ್ಲಿ, ಬಾಲ್ ಮತ್ತು ಜೋರ್ಡನ್ ತಲಾ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News