×
Ad

ಟ್ವೆಂಟಿ-20ಯಲ್ಲಿ ಧೋನಿ ಹೊಸ ದಾಖಲೆ

Update: 2018-07-08 22:24 IST

ಬ್ರಿಸ್ಟಲ್, ಜು.8: ಭಾರತದ ಮಾಜಿ ನಾಯಕ ಎಂಎಸ್ ಧೋನಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಎರಡು ಹೊಸ ದಾಖಲೆ ಮಾಡಿ ಗಮನ ಸೆಳೆದರು.

ಇಂಗ್ಲೆಂಡ್ ವಿರುದ್ಧ ರವಿವಾರ ನಡೆದ 3ನೇ ಟ್ವೆಂಟಿ-20 ಪಂದ್ಯದಲ್ಲಿ ಸಿದ್ದಾರ್ಥ್ ಕೌಲ್ ಎಸೆದ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಪ್ಲಂಕೆಟ್ ನೀಡಿದ ಕ್ಯಾಚ್ ಪಡೆದ ಧೋನಿ ಒಂದೇ ಪಂದ್ಯದಲ್ಲಿ ಐದು ಕ್ಯಾಚ್‌ಗಳನ್ನು ಪಡೆದ ಮೊದಲ ವಿಕೆಟ್‌ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಧೋನಿ ಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ 50 ಕ್ಯಾಚ್ ಪಡೆದ ಮೊದಲ ವಿಕೆಟ್‌ಕೀಪರ್ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ. ದೀಪಕ್ ಚಹಾರ್ ಎಸೆತದಲ್ಲಿ ಜೇಸನ್ ರಾಯ್ ಕ್ಯಾಚ್ ಪಡೆದು ಈ ಸಾಧನೆ ಮಾಡಿದರು.

93 ಪಂದ್ಯಗಳಲ್ಲಿ ಧೋನಿ 87 ದಾಂಡಿಗರನ್ನು(54 ಕ್ಯಾಚ್,33 ಸ್ಟಂಪಿಂಗ್ಸ್)ಬಲಿ ಪಡೆದಿದ್ದಾರೆ. ಪಂದ್ಯದಲ್ಲಿ 5 ಕ್ಯಾಚ್ ಪಡೆದ ಧೋನಿ ಕ್ರಿಸ್ ಜೋರ್ಡನ್‌ರನ್ನು ಬುಲೆಟ್ ಥ್ರೋ ಮೂಲಕ ರನೌಟ್ ಮಾಡಿ ಗಮನ ಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News