ಟ್ವೆಂಟಿ-20 ರ್ಯಾಂಕಿಂಗ್: ರಾಹುಲ್ ನಂ.2
Update: 2018-07-09 23:50 IST
ದುಬೈ, ಜು.9: ಭಾರತದ ಅಗ್ರ ಸರದಿಯ ದಾಂಡಿಗ ಲೋಕೇಶ್ ರಾಹುಲ್ ಟ್ವೆಂಟಿ-20 ಕ್ರಿಕೆಟ್ ರ್ಯಾಂಕಿಂಗ್‌ನಲ್ಲಿ 2ನೇ ಸ್ಥಾನ ಗಳಿಸುವ ಮೂಲಕ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ.
ರಾಹುಲ್ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ 70 ರನ್, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಶತಕ(ಔಟಾಗದೆ 101), 2ನೇ ಪಂದ್ಯದಲ್ಲಿ 6ರನ್ ಮತ್ತು 3ನೇ ಪಂದ್ಯದಲ್ಲಿ 19 ರನ್ ಗಳಿಸಿದ್ದರು.
ರೋಹಿತ್ ಶರ್ಮಾ 11ನೇ ಮತ್ತು ನಾಯಕ ವಿರಾಟ್ ಕೊಹ್ಲಿ 12ನೇ ಸ್ಥಾನ ಗಳಿಸಿದ್ದಾರೆ.