×
Ad

ಆಯಾಸವಾಗದಿರಲು ರಷ್ಯಾ ಫುಟ್ಬಾಲ್ ಆಟಗಾರರು ಮಾಡಿದ್ದೇನು?

Update: 2018-07-11 16:01 IST

ರಷ್ಯಾ, ಜು.11: ರಷ್ಯಾದ ಫುಟ್ಬಾಲ್ ಆಟಗಾರರು ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಬಳಲಿಕೆಯನ್ನು ತಾತ್ಕಾಲಿಕವಾಗಿ ಮುಂದೂಡುವ ಸಲುವಾಗಿ ಅಮೋನಿಯಾ ಇನ್‍ಹೆಲೆಂಟ್‍ಗಳನ್ನು ಬಳಸಿರುವ ಅಂಶ ಇದೀಗ ಬಹಿರಂಗವಾಗಿದೆ.

ಅಮೋನಿಯಾ ಆಧರಿತ ರಾಸಾಯನಿಕವನ್ನು ತಂಡದ ಆಟಗಾರರು ಬಳಸಿರುವುದನ್ನು ತಂಡದ ವೈದ್ಯರು ದೃಢಪಡಿಸಿದ್ದಾರೆ. ಆದರೆ ಇದನ್ನು ಡೋಪಿಂಗ್ ಅಥವಾ ಉದ್ದೀಪನಾ ಔಷಧ ಎಂದು ಪರಿಗಣಿಸಲಾಗದು ಎಂದು ಸಮರ್ಥಿಸಿಕೊಂಡಿದ್ದಾರೆ.

"ಇದು ಸಾಮಾನ್ಯ ಅಮೋನಿಯಾ. ಇದನ್ನು ಹತ್ತಿ ಮತ್ತು ಉಣ್ಣೆಯಲ್ಲಿ ತೇವಾಂಶ ಹೀರಿಕೊಳ್ಳುವಂತೆ ಮಾಡಿ ಅದನ್ನು ಮೂಗಿನ ಬಳಿ ಹಿಡಿದು ಉಸಿರಾಡಲಾಗುತ್ತದೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದನ್ನು ಸಾವಿರಾರು ಅಥ್ಲೀಟ್‍ಗಳು ಮಾಡುತ್ತಾ ಬಂದಿದ್ದಾರೆ. ಇದಕ್ಕೂ ಉದ್ದೀಪನ ಔಷಧಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ರಷ್ಯಾದ ಆಟಗಾರರು ಆಟದ ವೇಳೆ ತಮ್ಮ ಮೂಗು ಉಜ್ಜಿಕೊಳ್ಳುತ್ತಿರುವ ಫೋಟೊವನ್ನು ಜರ್ಮನಿಯ ಪತ್ರಿಕೆಯೊಂದು ಬಹಿರಂಗಪಡಿಸಿತ್ತು. ಅಮೋನಿಯಾ ಇನ್‍ಹೆಲೆಂಟ್ ಅಥವಾ ವಾಸನೆ ಆಘ್ರಾಣಿಸುವ ಲವಣವನ್ನು ವಿಶ್ವ ಉದ್ದೀಪನಾ ವಿರೋಧಿ ಸಂಹಿತೆ ನಿಷೇಧಿಸಿಲ್ಲ. ಆದರೆ ಇದನ್ನು ಪವರ್ ಲಿಫ್ಟರ್ ಗಳು ತಮ್ಮ ಕ್ಷಮತೆ ಸುಧಾರಿಸಲು ಬಳಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News