‘ಟಾಪ್’ ಯೋಜನೆಯಲ್ಲಿ ಹಾಕಿ ಆಟಗಾರರಿಗೆ ಮಾಸಿಕ ಭತ್ಯೆ

Update: 2018-07-11 18:22 GMT

ಹೊಸದಿಲ್ಲಿ, ಜು.11: ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ(ಟಾಪ್)ಯೋಜನೆಯಡಿ ಭಾರತದ ಪುರುಷರ ಹಾಕಿ ತಂಡದ 18 ಸದಸ್ಯರುಗಳಿಗೆ ಪ್ರತಿ ತಿಂಗಳು 50,000 ರೂ. ಭತ್ಯೆ ನೀಡಲು ಕ್ರೀಡಾ ಸಚಿವಾಲಯದ ಮಿಶನ್ ಒಲಿಂಪಿಕ್ಸ್ ಸೆಲ್(ಎಂಒಸಿ)ಹಸಿರು ನಿಶಾನೆ ತೋರಿದೆ.

ಟಾಪ್ ಯೋಜನೆಯಡಿ ಮಾಸಿಕ ಭತ್ತೆ ನೀಡುವುದನ್ನು ಕ್ರೀಡಾ ಸಚಿವಾಲಯ ಕಳೆದ ವರ್ಷ ಆರಂಭಿಸಿತ್ತು. ಹಾಕಿ ತಂಡ ಇದೇ ಮೊದಲ ಬಾರಿ ಈ ಸೌಲಭ್ಯವನ್ನು ಪಡೆಯಲಿದೆ.

ಹೊಸ ಕೋಚ್ ಹರೇಂದ್ರ ಸಿಂಗ್ ಮಾರ್ಗದರ್ಶನದಲ್ಲಿ ಭಾರತದ ಪ್ರದರ್ಶನ ಉತ್ತಮವಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಭಾರತ ಇತ್ತೀಚೆಗೆ ಹಾಲೆಂಡ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಎರಡನೇ ಸ್ಥಾನ ಪಡೆದಿತ್ತು.

ಮುಂಬರುವ ವಿಶ್ವಕಪ್ ಹಾಗೂ ಏಶ್ಯನ್ ಗೇಮ್ಸ್‌ನಲ್ಲಿನ ಪ್ರದರ್ಶನವನ್ನು ಆಧರಿಸಿ ಮಹಿಳಾ ಹಾಕಿ ತಂಡವನ್ನು ಟಾಪ್ ಯೋಜನೆಗೆ ಸೇರ್ಪಡೆಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ.

ಜಾರ್ಜಿಯದಲ್ಲಿ ಈಗ ನಡೆಯುತ್ತಿರುವ ತರಬೇತಿ ವೇಳೆ ಫಿಸಿಯೋ ಥೆರಪಿಸ್ಟ್ ಹಾಗೂ ಇತರ ಇಬ್ಬರು ಸಹಾಯಕರನ್ನು ನೇಮಿಸಿಕೊಳ್ಳಲು ಡಬಲ್ ಒಲಿಂಪಿಯನ್ ಕುಸ್ತಿಪಟು ಸುಶೀಲ್‌ಕುಮಾರ್‌ಗೆ 6.62 ಲಕ್ಷ ರೂ. ನೀಡುವ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಟರ್ಕಿಯಲ್ಲಿ ನಡೆಯುವ ಟೂರ್ನಮೆಂಟ್‌ನಲ್ಲಿ ಭಾಗವಹಿಸಲು ಹಾಗೂ ತರಬೇತಿ ನಡೆಸಲು ಬಜರಂಗ್ ಪೂನಿಯ ಹಾಗೂ ಸುಮಿತ್‌ಗೆ 3.22 ಲಕ್ಷ ರೂ. ಮಂಜೂರು ಮಾಡಲು ನಿರ್ಧರಿಸಲಾಗಿದೆ. ಟೆನಿಸ್ ಆಟಗಾರ ರಾಮ್‌ಕುಮಾರ್ ರಾಮನಾಥನ್ ತನ್ನ ತರಬೇತಿಗಾಗಿ, ಏಶ್ಯನ್ ಗೇಮ್ಸ್‌ಗೆ ಸಲಕರಣೆ ಖರೀದಿಗಾಗಿ 12.57 ಲಕ್ಷ ರೂ. ನೀಡಲಾಗುತ್ತದೆ. ಮೂವರು ಕಾಂಪೌಂಡ್ ಆರ್ಚರಿಗಳಾದ ತ್ರಿಶಾ ದೇಬ್, ರಜತ್ ಚೌಹಾಣ್ ಹಾಗೂ ಜ್ಯೋತಿ ಸುರೇಖಾಗೆ ಆರ್ಚರಿ ಸಾಧನಗಳ ಖರೀದಿಗೆ ಒಟ್ಟು 11.48 ಲಕ್ಷ ರೂ.ಮೀಸಲಿಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News