ಹುದೈದಾ ಬಂದರು ಮೂಲಕ ಹೌದಿ ಬಂಡುಕೋರರ ದಾಳಿ

Update: 2018-07-14 18:00 GMT

ದುಬೈ, ಜು. 14: ಯಮನ್‌ನ ಹುದೈದಾ ಬಂದರನ್ನು ಹೌದಿ ಬಂಡುಕೋರರು ಸೇನಾ ಕಾರ್ಯಾಚರಣಾ ವೇದಿಕೆಯಾಗಿ ಹಾಗೂ ಶಸ್ತ್ರ ಕಳ್ಳಸಾಗಾಣಿಕೆಯ ಕೇಂದ್ರವಾಗಿ ಪರಿವರ್ತಿಸಿದ್ದಾರೆ ಎಂದು ರಶ್ಯಕ್ಕೆ ಯಮನ್ ರಾಯಭಾರಿ ಅಹ್ಮದ್ ಅಲ್-ವಹೀಶಿ ಶನಿವಾರ ಹೇಳಿದ್ದಾರೆ ಎಂದು ಸೌದಿ ಅರೇಬಿಯದ ಸರಕಾರಿ ಸುದ್ದಿ ವಾಹಿನಿ ಅಲ್-ಅಕ್ಬರಿಯ ವರದಿ ಮಾಡಿದೆ.

ಈ ಬಂದರಿನ ಮೂಲಕ ಅಂತಾರಾಷ್ಟ್ರೀಯ ನೌಕಾ ಮಾರ್ಗಗಳು ಹಾಗೂ ಮಾನವೀಯ ನೆರವು ಹಡಗುಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News