ಗಾಝಾ ಜೊತೆಗಿನ ಗಡಿ ದ್ವಾರವನ್ನು ಮುಚ್ಚಿದ ಇಸ್ರೇಲ್

Update: 2018-07-17 17:39 GMT

ಜೆರುಸಲೇಮ್, ಜು. 17: ಹಮಾಸ್‌ನ ‘ನಿರಂತರ ಆಕ್ರಮಣ’ಗಳಿಗೆ ಪ್ರತಿಯಾಗಿ, ಗಾಝಾ ಪಟ್ಟಿಯೊಂದಿಗಿನ ತನ್ನ ಏಕೈಕ ಸರಕು ಸಾಗಣೆ ದ್ವಾರವನ್ನು ಮುಚ್ಚಲಾಗಿದೆ ಎಂದು ಇಸ್ರೇಲ್ ಹೇಳಿದೆ.

ದಿನದ 24 ಗಂಟೆಗಳ ತೀವ್ರ ಹೋರಾಟವನ್ನು ಕೊನೆಗೊಳಿಸುವ ಯುದ್ಧವಿರಾಮಕ್ಕೆ ಇಸ್ರೇಲ್ ಒಪ್ಪಿರುವ ಹೊರತಾಗಿಯೂ ಈ ಬೆಳವಣಿಗೆ ನಡೆದಿದೆ.

ಕರೀಮ್ ಶಾಲೊಮ್ ದ್ವಾರದ ಮೂಲಕ ಅನಿಲ ಮತ್ತು ಇಂಧನ ಸಾಗಣೆಯನ್ನು ರವಿವಾರದವರೆಗೆ ನಿಲ್ಲಿಸಲಾಗಿದೆ, ಆದರೆ, ಆಹಾರ ಮತ್ತು ಅಗತ್ಯ ಔಷಧಿಗಳ ಸಾಗಣೆಗೆ ಅವಕಾಶ ನೀಡಲಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಅವಿಗ್ಡರ್ ಲೈಬರ್‌ಮನ್ ಹೇಳಿದರು.

ಫೆಲೆಸ್ತೀನಿಯರು ಗಾಝಾ ಕರಾವಳಿಯಿಂದ 3 ನಾಟಿಕಲ್ ಮೈಲಿ ಮೀರಿ ನೌಕಾಯಾನ ಮಾಡುವುದನ್ನೂ ನಿರ್ಬಂಧಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News