ಅಮೆರಿಕ ವಿರುದ್ಧ ಅಂತರ್‌ರಾಷ್ಟ್ರೀಯ ನ್ಯಾಯಾಲಯಕ್ಕೆ ಇರಾನ್ ದೂರು

Update: 2018-07-17 17:50 GMT

ಟೆಹರಾನ್, ಜು. 17: ಅಮೆರಿಕ ತನ್ನ ಮೇಲೆ ಪುನಃ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿರುವುದರ ವಿರುದ್ಧ ಇರಾನ್ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದೆ ಎಂದು ಇರಾನ್ ವಿದೇಶ ಸಚಿವಾಲಯ ಮಂಗಳವಾರ ಹೇಳಿದೆ.

‘‘ಇರಾನ್ ವಿರುದ್ಧ ಏಕಪಕ್ಷೀಯ ಆರ್ಥಿಕ ದಿಗ್ಬಂಧನಗಳನ್ನು ಕಾನೂನುಬಾಹಿರವಾಗಿ ಮರುಹೇರಿರುವುದಕ್ಕೆ ಅಮೆರಿಕವನ್ನು ಉತ್ತರದಾಯಿಯಾಗಿಸುವುದು ಈ ಕ್ರಮದ ಹಿಂದಿನ ಉದ್ದೇಶವಾಗಿದೆ’’ ಎಂದು ಇರಾನ್ ವಿದೇಶ ಸಚಿವ ಮುಹಮ್ಮದ್ ಜಾವೇದ್ ಶರೀಫ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.

‘‘ರಾಜತಾಂತ್ರಿಕತೆ ಮತ್ತು ಕಾನೂನುಬದ್ಧ ಬದ್ಧತೆಗಳಿಗೆ ಅಮೆರಿಕ ತಿರಸ್ಕಾರ ಹೊಂದಿರುವ ಹೊರತಾಗಿಯೂ ಕಾನೂನಿನ ಆಡಳಿತಕ್ಕೆ ಇರಾನ್ ಬದ್ಧವಾಗಿದೆ. ಅಂತಾರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸುವ ಅದರ ಹವ್ಯಾಸವನ್ನು ಪ್ರಶ್ನಿಸುವುದು ಅಗತ್ಯವಾಗಿದೆ’’ ಎಂದರು.

2015ರಲ್ಲಿ ಜಾಗತಿಕ ಶಕ್ತ ದೇಶಗಳು ಇರಾನ್ ಜೊತೆಗೆ ಮಾಡಿಕೊಂಡ ಪರಮಾಣು ಒಪ್ಪಂದದಿಂದ ಅಮೆರಿಕ ಈ ವರ್ಷದ ಮೇ ತಿಂಗಳಲ್ಲಿ ಹೊರಗೆ ಬಂದು ಇರಾನ್ ಮೇಲೆ ಆರ್ಥಿಕ ದಿಗ್ಬಂಧನಗಳನ್ನು ಮರುಘೋಷಿಸಿರುವುದನ್ನು ಸ್ಮರಿಸಬಹುದಾಗಿದೆ.

ಇದನ್ನು ವಿರೋಧಿಸಿ ಇರಾನ್ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News