ಭಾರತೀಯ ಗಡಿ ಸಮೀಪ ಚೀನಾದ ಹವಾಮಾನ ಕೇಂದ್ರ

Update: 2018-07-17 18:07 GMT

ಬೀಜಿಂಗ್, ಜು. 17: ಟಿಬೆಟ್‌ನಲ್ಲಿರುವ ಭಾರತೀಯ ಗಡಿ ಸಮೀಪ ಚೀನಾವು ಮಾನವರಹಿತ ಸ್ವಯಂಚಾಲಿತ ಹವಾಮಾನ ವೀಕ್ಷಣಾ ಕೇಂದ್ರವೊಂದನ್ನು ಸ್ಥಾಪಿಸಿದೆ. ಭಾರತದ ಜೊತೆಗೆ ಸಂಘರ್ಷವೇನಾದರೂ ಏರ್ಪಟ್ಟರೆ, ಚೀನಾ ಸೇನೆಗೆ ನೆರವು ನೀಡುವುದಕ್ಕಾಗಿ ಇದನ್ನು ಸ್ಥಾಪಿಸಲಾಗಿದೆ.

ಮುಂದಿನ ದಿನಗಳಲ್ಲಿ ಭಾರತದ ಜೊತೆಗಿನ ಗಡಿಯುದ್ದಕ್ಕೂ ಟಿಬೆಟ್‌ನಲ್ಲಿ ಇಂಥ ಹೆಚ್ಚಿನ ಕೇಂದ್ರಗಳನ್ನು ನಿರ್ಮಿಸುವ ಯೋಜನೆಯನ್ನು ಚೀನಾ ಹೊಂದಿದೆ.

ಪ್ರಸಕ್ತ ಹವಾಮಾನ ಕೇಂದ್ರವನ್ನು ಟಿಬೆಟ್‌ನ ಶನ್ನಾನ್ ರಾಜ್ಯದ ಲೂಂಝ್ ಕೌಂಟಿಯ ವ್ಯಾಪ್ತಿಯಲ್ಲಿ ಬರುವ ಯುಮೈ ಟೌನ್‌ಶಿಪ್‌ನಲ್ಲಿ ನಿರ್ಮಿಸಲಾಗಿದೆ. ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿ ಸಾರಿಗೆ ಮತ್ತು ಸಂಪರ್ಕಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡುತ್ತದೆ ಎಂದು ಸರಕಾರಿ ಒಡೆತನದ ‘ಗ್ಲೋಬಲ್ ಟೈಮ್ಸ್’ ವರದಿ ಮಾಡಿದೆ.

ಪ್ರಾದೇಶಿಕ ಸಂಘರ್ಷಗಳ ಸಮಯದಲ್ಲಿಯೂ ಅದು ಕಾನೂನು ವ್ಯವಸ್ಥೆ ಕಾಪಾಡಿಕೊಳ್ಳಲು ನೆರವು ನೀಡಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News