ಅಮೆಝಾನ್ ಸ್ಥಾಪಕ ಜೆಫ್ ಬೆಝಾಸ್ ಜಗತ್ತಿನ ಅತ್ಯಂತ ಶ್ರೀಮಂತ

Update: 2018-07-17 18:10 GMT

ನ್ಯೂಯಾರ್ಕ್, ಜು. 17: ಅಮೆಝಾನ್.ಕಾಮ್ ಇಂಕ್ ಇದರ ಸ್ಥಾಪಕ ಜೆಫ್ ಬೆಝಾಸ್ ಆಧುನಿಕ ಇತಿಹಾಸದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

 ಅವರು ಸೋಮವಾರ 150 ಬಿಲಿಯ ಡಾಲರ್ (ಸುಮಾರು 10,26,487 ಕೋಟಿ ರೂಪಾಯಿ) ಸಂಪತ್ತಿನ ಒಡೆಯರಾದರು ಎಂದು ‘ಬ್ಲೂಮ್‌ಬರ್ಗ್ ಬಿಲಿಯನೇರ್ಸ್‌ ಇಂಡೆಕ್ಸ್’ ವರದಿ ಮಾಡಿದೆ.

ಇದು ಜಗತ್ತಿನ ಎರಡನೇ ಅತಿ ಶ್ರೀಮಂತರಾಗಿರುವ ಮೈಕ್ರೋಸಾಫ್ಟ್ ಕಾರ್ಪ್‌ನ ಸಹ ಸಂಸ್ಥಾಪಕ ಬಿಲ್ ಗೇಟ್ಸ್‌ರ ಸಂಪತ್ತಿಗಿಂತ ಸುಮಾರು 55 ಬಿಲಿಯ ಡಾಲರ್ (ಸುಮಾರು 3,76,378 ಕೋಟಿ ರೂಪಾಯಿ) ಹೆಚ್ಚಾಗಿದೆ.

ಅವರ ನಿವ್ವಳ ಸಂಪತ್ತು ಈ ವರ್ಷ 52 ಬಿಲಿಯ ಡಾಲರ್ (ಸುಮಾರು 3,55,849 ಕೋಟಿ ರೂಪಾಯಿ)ನಷ್ಟು ಹೆಚ್ಚಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News