ಉಗ್ರವಾದ ನಿಗ್ರಹ: ಮುಸ್ಲಿಮ್ ನಾಯಕರ ಚರ್ಚೆ

Update: 2018-07-19 15:59 GMT

ಜಿದ್ದಾ, ಜು. 19: ಮೊರೊಕ್ಕೊ ಪ್ರಧಾನಿ ಸಾದುದ್ದೀನ್ ಉತ್ಮಾನಿ ಮತ್ತು ಮುಸ್ಲಿಮ್ ವರ್ಲ್ಡ್ ಲೀಗ್ (ಎಂಡಬ್ಲ್ಯುಎಲ್) ಮಹಾಕಾರ್ಯದರ್ಶಿ ಮುಹಮ್ಮದ್ ಬಿನ್ ಅಬ್ದುಲ್ ಕರೀಮ್ ಅಲ್-ಇಸ್ಸ ಬುಧವಾರ ನಡೆದ ಸಮಾವೇಶವೊಂದರಲ್ಲಿ ಜಂಟಿ ಭಯೋತ್ಪಾದನೆ ನಿಗ್ರಹ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಉಗ್ರವಾದದ ವಿರುದ್ಧ ಸೌಮ್ಯವಾದದ ಉಪಕ್ರಮಗಳನ್ನು ಬೆಂಬಲಿಸಲು ಪರಸ್ಪರ ಸಹಕಾರದ ಅಗತ್ಯವಿದೆ ಎನ್ನುವುದನ್ನು ಇಬ್ಬರು ನಾಯಕರು ಒಪ್ಪಿಕೊಂಡಿದ್ದಾರೆ.

ಅಲ್-ಇಸ್ಸ ಮೊರೊಕ್ಕೊ ಸಂಸತ್ತಿಗೂ ಭೇಟಿ ನೀಡಿ ಸ್ಪೀಕರ್ ಹಬೀಬ್ ಅಲ್-ಮಾಲಿಕಿಯನ್ನು ಭೇಟಿಯಾದರು ಹಾಗೂ ಪರಸ್ಪರ ಹಿತಾಸಕ್ತಿಯ ವಿಷಯಗಳ ಬಗ್ಗೆ ಚರ್ಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News