ರಾಮ್‌ಕುಮಾರ್ ಸೆಮಿಫೈನಲ್‌ಗೆ, ಪೇಸ್ ಸವಾಲು ಅಂತ್ಯ

Update: 2018-07-20 18:26 GMT

ಹೊಸದಿಲ್ಲಿ, ಜು.20: ನ್ಯೂಪೋರ್ಟ್‌ನಲ್ಲಿ ನಡೆದ ಹಾಲ್ ಆಫ್ ಫೇಮ್ ಓಪನ್ ಗ್ರಾಸ್‌ರೂಟ್ ಎಟಿಪಿ ಟೂರ್ನಮೆಂಟ್‌ನಲ್ಲಿ ರಾಮ್‌ಕುಮಾರ್ ರಾಮನಾಥನ್ ಮೊದಲ ಬಾರಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.

ಹಿರಿಯ ಆಟಗಾರ ಲಿಯಾಂಡರ್ ಪೇಸ್ ಡಬಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಸೋಲುಂಡು ಟೂರ್ನಿಯಿಂದ ಹೊರ ನಡೆದಿದ್ದಾರೆ. ಚೆನ್ನೈನ 23ರ ಹರೆಯದ ರಾಮ್‌ಕುಮಾರ್ ಶುಕ್ರವಾರ 1 ಗಂಟೆ, 18 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಕೆನಡಾದ ವಾಸೆಕ್ ಪೊಸ್ಪಿಸಿಲ್‌ರನ್ನು 7-5, 6-2 ನೇರ ಸೆಟ್‌ಗಳಿಂದ ಸೋಲಿಸಿದ್ದಾರೆ.

161ನೇ ರ್ಯಾಂಕಿನ ರಾಮ್‌ಕುಮಾರ್ ಟೂರ್ನಿಯ ಅಂತಿಮ -4ರ ಸುತ್ತಿನಲ್ಲಿ ಅಮೆರಿಕದ ಟಿಮ್ ಸ್ಮೈಝೆಕ್‌ರನ್ನು ಎದುರಿಸ ಲಿದ್ದಾರೆ. ರಾಮನಾಥನ್ ಕಳೆದ ವರ್ಷ ಅಂಟಾಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ವಿಶ್ವದ ನಂ.8ನೇ ಆಟಗಾರ ಡೊಮಿನಿಕ್ ಥೀಮ್‌ರನ್ನು ಸೋಲಿಸಿ ಶಾಕ್ ನೀಡಿದ್ದರು.

ಫೆಬ್ರವರಿಯಲ್ಲಿ ಡೇವಿಸ್‌ಕಪ್‌ನಲ್ಲಿ ಗರಿಷ್ಠ ಡಬಲ್ಸ್ ಪಂದ್ಯ ಗಳನ್ನು ಜಯಿಸಿ ವಿಶ್ವ ದಾಖಲೆ ನಿರ್ಮಿಸಿದ ಬಳಿಕ ಮೊದಲ ಡಬಲ್ಸ್ ಪಂದ್ಯವನ್ನು ಆಡಿದ ಪೇಸ್ ಹಾಗೂ ಅವರ ಅಮೆರಿಕದ ಜೊತೆಗಾರ ಜಮ್ಮಿ ಸೆರೆಟನಿ ಪುರುಷರ ಡಬಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಜೀವನ್ ಹಾಗೂ ಆಸ್ಟಿನ್ ಕ್ರಾಜಿಸೆಕ್‌ರನ್ನು ಸೋಲಿಸಿದರು. ಜೀವನ್ ಹಾಗೂ ಆಸ್ಟಿನ್ ಮೊದಲ ಸುತ್ತಿನ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ನಿಕೊಲಸ್ ಮೊನ್ರೊಯ್ ಹಾಗೂ ಜಾನ್-ಪ್ಯಾಟ್ರಿಕ್ ಸ್ಮಿತ್‌ರನ್ನು ಸೋಲಿಸಿ ಆಘಾತ ನೀಡಿದ್ದರು. ಜೀವನ್ ಹಾಗೂ ಆಸ್ಟಿನ್‌ಸೆಮಿ ಫೈನಲ್‌ನಲ್ಲಿ ಸ್ಪೇನ್‌ನ ಮಾರ್ಸೆಲ್ ಅರೆವಾಲೊ ಹಾಗೂ ಮೆಕ್ಸಿಕೊದ ಮಿಗುಯೆಲ್ ಆ್ಯಂಜೆಲ್ ರೆಯೆಸ್‌ರನ್ನು ಎದುರಿಸಲಿದ್ದಾರೆ. ಫಾರ್ಮ್‌ನಲ್ಲಿರುವದಿವಿಜ್ ಶರಣ್ ಹಾಗೂ ಜಾಕ್ಸನ್ ವಿಥ್ರೊ ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೀಯದ ಮ್ಯಾಥ್ಯೂ ಎಬ್ಡೆನ್ ಹಾಗೂ ಉಕ್ರೇನ್‌ನ ಸೆರ್ಗಿ ಸ್ಟಾಕೊವ್‌ಸ್ಕಿ ಅವರನ್ನು 7-6(4), 6-3 ಸೆಟ್ ಗಳಿಂದ ಸೋಲಿಸಿದ್ದಾರೆ. ಶರಣ್-ಜಾಕ್ಸನ್ ಜೋಡಿ ಸೆಮಿಫೈನಲ್ ನಲ್ಲಿ ನ್ಯೂಝಿಲೆಂಡ್‌ನ ಅರ್ಟೆಮ್ ಸಿಟಾಕ್ ಹಾಗೂ ಇಸ್ರೇಲ್‌ನ ಜೊನಾಥನ್ ಎಲ್ರಿಚ್‌ರನ್ನು ಎದುರಿಸಲಿದ್ದಾರೆ.

ಅರ್ಟೆಮ್ ಹಾಗೂ ಜೊನಾಥನ್ ಮತ್ತೊಂದು ರೋಚಕ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಮೂರನೇ ಶ್ರೇಯಾಂಕದ ಭಾರತದ ಪೂರವ್ ರಾಜಾ ಹಾಗೂ ಬ್ರಿಟನ್‌ನ ಕೆನ್ ಸ್ಕಪ್‌ಸ್ಕಿ ಅವರನ್ನು 4-6, 6-3, 10-8 ಸೆಟ್‌ಗಳಿಂದ ಸೋಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News