ಕತರ್ ಹಜ್ ಯಾತ್ರಿಗಳಿಗೆ ನೂತನ ಲಿಂಕ್: ಸೌದಿ

Update: 2018-07-21 16:17 GMT

ರಿಯಾದ್, ಜು. 21: ಹಜ್ ಯಾತ್ರೆ ಕೈಗೊಳ್ಳಬಯಸುವ ಕತರ್ ಪ್ರಜೆಗಳ ಮನವಿಗಳನ್ನು ಸ್ವೀಕರಿಸಲು ನೂತನ ವೆಬ್‌ಸೈಟ್ ಲಿಂಕೊಂದನ್ನು ಒದಗಿಸಲಾಗಿದೆ ಎಂದು ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯ ತಿಳಿಸಿದೆ.

ಹಳೆಯ ಲಿಂಕನ್ನು ಕತರ್ ಅಧಿಕಾರಿಗಳು ಬ್ಲಾಕ್ ಮಾಡಿದ ಬಳಿಕ ಈ ಕ್ರಮ ತೆಗೆದುಕೊಳ್ಳಲಾಗಿದೆ.

 ಹಜ್ ನಿರ್ವಹಿಸಬಯಸುವ ಕತರ್ ನಿವಾಸಿಗಳು ನೂತನ ಲಿಂಕ್ https://qh1.Hajj.gov.sa

 ನ್ನು ಬಳಸಬಹುದಾಗಿದೆ ಎಂದು ಸೌದಿ ಪ್ರೆಸ್ ಏಜನ್ಸಿ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News