ಸೌದಿಯ ಮೊದಲ ರೋಬೋಟ್ ಚಾಲಿತ ಸ್ಮಾರ್ಟ್ ಔಷಧಿ ಅಂಗಡಿಗೆ ಚಾಲನೆ

Update: 2018-07-21 16:20 GMT

ತಬೂಕ್ (ಸೌದಿ ಅರೇಬಿಯ), ಜು. 21: ಸೌದಿ ಅರೇಬಿಯದ ಪ್ರಥಮ ರೋಬೊಟ್ ಚಾಲಿತ ಸ್ಮಾರ್ಟ್ ಔಷಧಾಲಯ (ಫಾರ್ಮಸಿ)ವನ್ನು ತಬೂಕ್ ವಲಯದ ಗವರ್ನರ್, ರಾಜಕುಮಾರ ಫಾಹದ್ ಬಿನ್ ಸುಲ್ತಾನ್ ಗುರುವಾರ ಕಿಂಗ್ ಫಾಹದ್ ಸ್ಪೆಷಲಿಸ್ಟ್ ಆಸ್ಪತ್ರೆಯಲ್ಲಿ ಉದ್ಘಾಟಿಸಿದ್ದಾರೆ.

ಈ ಸ್ಮಾರ್ಟ್ ಫಾರ್ಮಸಿಯು ಗಂಟೆಗೆ 1,500 ಔಷಧಗಳ ಪ್ಯಾಕೇಜನ್ನು ವಿತರಿಸುತ್ತದೆ, 20,000ಕ್ಕೂ ಅಧಿಕ ಔಷಧಗಳ ಪ್ಯಾಕೇಜನ್ನು ಸಂಗ್ರಹಿಸುತ್ತದೆ, ಕಾಲ ಮೀರಿದ ಔಷಧಿಗಳನ್ನು ತಿರಸ್ಕರಿಸುತ್ತದೆ ಹಾಗೂ ಗಂಟೆಗೆ 240 ಔಷಧ ಚೀಟಿಗಳನ್ನು ನಿಭಾಯಿಸುತ್ತದೆ.

ಈ ಮೂಲಕ ಅದು ರೋಗಿಗಳು ಮತ್ತು ಫಾರ್ಮಸಿಸ್ಟ್‌ಗಳ ಸಮಯವನ್ನು ಉಳಿಸುತ್ತದೆ ಹಾಗೂ ಅತ್ಯುತ್ತಮ ಸುರಕ್ಷಾ ಮಾನದಂಡಗಳನ್ನು ಅನುಸರಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News