ಪಾಕ್ ಪಕ್ಷೇತರ ಅಭ್ಯರ್ಥಿ ಆತ್ಮಹತ್ಯೆ

Update: 2018-07-21 16:28 GMT

ಲಾಹೋರ್, ಜು. 21: ಪಾಕಿಸ್ತಾನದ ಮುಂಬರುವ ಚುನಾವಣೆಯಲ್ಲಿ ಸಂಸತ್ತು ಮತ್ತು ಪ್ರಾಂತೀಯ ಅಸೆಂಬ್ಲಿಗೆ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿಯೊಬ್ಬರು ತನ್ನ ಮಕ್ಕಳೊಂದಿಗಿನ ವಿವಾದಕ್ಕೆ ಸಂಬಂಧಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶನಿವಾರ ಮಾಧ್ಯಮ ವರದಿಯೊಂದು ಹೇಳಿದೆ.

ಚುನಾವಣೆ ಜುಲೈ 25ರಂದು ನಡೆಯಲಿದೆ.

ಮಿರ್ಝಾ ಮುಹಮ್ಮದ್ ಅಹ್ಮದ್ ಮುಘಲ್ ಫೈಸಲಾಬಾದ್‌ನಿಂದ ನ್ಯಾಶನಲ್ ಅಸೆಂಬ್ಲಿ ಮತ್ತು ಪ್ರಾಂತೀಯ ಅಸೆಂಬ್ಲಿಗಳಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ತನ್ನ ಮಕ್ಕಳೊಂದಿಗೆ ವಿವಾದ ಕಾಣಿಸಿಕೊಂಡ ಬಳಿಕ ಅವರು ತನಗೆ ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News