“ಅಮೆರಿಕ-ಮೆಕ್ಸಿಕೊ ಗಡಿಯಲ್ಲಿ 60,000 ಭಾರತೀಯ ಯುವಜನರ ಬಂಧನ”

Update: 2018-07-21 17:40 GMT

ಲುಧಿಯಾನಾ,ಜು.21: ಅಮೆರಿಕ-ಮೆಕ್ಸಿಕೋ ಗಡಿಯಲ್ಲಿರುವ ಶಿಬಿರಗಳಲ್ಲಿ 60,000 ಭಾರತೀಯ ಯುವಜನರನ್ನು ಬಂಧನದಲ್ಲಿಡಲಾಗಿದೆ ಮತ್ತು ಈ ಪೈಕಿ ಪಂಜಾಬಿಗೆ ಸೇರಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಮನೀಷ್ ತಿವಾರಿ ಅವರು ಶನಿವಾರ ಇಲ್ಲಿ ಹೇಳಿದರು.

ತನ್ನ ಇತ್ತೀಚಿನ ಅಮೆರಿಕ ಭೇಟಿ ಸಂದರ್ಭ ತಾನು ಗಡಿಪ್ರದೇಶಕ್ಕೆ ಖುದ್ದು ಭೇಟಿಯನ್ನು ನೀಡಿದ್ದು,ಅಲ್ಲಿ ಪರಿಸ್ಥಿತಿ ಗಂಭೀರವಾಗಿದೆ ಎಂದರು.

ಇಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಮೆಕ್ಸಿಕೊದ ಮೂಲಕ ಅಮೆರಿಕದೊಳಗೆ ಅಕ್ರಮವಾಗಿ ನುಸುಳಲು ಪ್ರಯತ್ನಿಸಿದ್ದ 60,000 ಭಾರತೀಯರು ಬಂಧನದಲ್ಲಿದ್ದಾರೆ. ಈ ಪೈಕಿ ಶೇ.90 ರಷ್ಟು ಜನರು ಪಂಜಾಬಿಗಳಾಗಿದ್ದಾರೆ ಎಂದರು.

ಬಂಧನದಲ್ಲಿರುವವರ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು,ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಟ್ಟದಲ್ಲಿ ಅವರ ಬಿಡುಗಡೆಗೆ ಮಾತುಕತೆಗಳು ನಡೆಯಬೇಕಾಗಿವೆ ಮತ್ತು ತಾನೀಗಾಗಲೇ ಈ ವಿಷಯವನ್ನು ಎತ್ತಿದ್ದೇನೆ ಎಂದರು. ಪಂಜಾಬ ಕೂಡ ಯುವಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News