ಶ್ರೀಲಂಕಾಗೆ 295 ಮಿಲಿಯನ್ ಡಾಲರ್ ಅನುದಾನ ನೀಡಿದ ಚೀನಾ

Update: 2018-07-22 16:07 GMT

ಕೊಲಂಬೊ, ಜು.22: ಶ್ರೀಲಂಕಾ ಮೇಲೆ ತನ್ನ ಪ್ರಭಾವ ಹೆಚ್ಚು ಮಾಡುವ ಕ್ರಮವಾಗಿ ದ್ವೀಪರಾಷ್ಟ್ರಕ್ಕೆ 295 ಮಿಲಿಯನ್ ಡಾಲರ್‌ಗಳ ಅನುದಾನವನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪೊಲೊನರುವ್ದಲ್ಲಿ ಚೀನಾ ಅನುದಾನದಿಂದ ನಿರ್ಮಾಣಗೊಳ್ಳುತ್ತಿರುವ ಕಿಡ್ನಿ ಆಸ್ಪತ್ರೆಯ ನಿರ್ಮಾಣಕಾರ್ಯದ ಆರಂಭದ ಸೂಚನೆಯಾಗಿ ಶನಿವಾರ ನಡೆದ ಸಮಾರಂಭದಲ್ಲಿ ಮಾತನಾಡಿದ ದ್ವೀಪರಾಷ್ಟ್ರದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಈ ಮಾಹಿತಿಯನ್ನು ನೀಡಿದ್ದಾರೆ. ಈ ಸಮಾರಂಭಕ್ಕೆ ದಿನಾಂಕವನ್ನು ನಿಗದಿಪಡಿಸಲು ಚೀನಾದ ರಾಯಭಾರಿ ನನ್ನ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನನಗೆ ಇನ್ನೊಂದು ಉಡುಗೊರೆಯನ್ನು ಕಳುಹಿಸಿದ್ದಾರೆ ಎಂದು ತಿಳಿಸಿದರು ಎಂದು ಸಿರಿಸೇನಾ ಸಮಾರಂಭದಲ್ಲಿ ತಿಳಿಸಿದ್ದಾರೆ.

 ಅವರು ನನಗೆ ಎರಡು ಮಿಲಿಯನ್ ಯೆನ್ ನೀಡಿದ್ದು ಅದನ್ನು ನಾನು ನನಗೆ ಬೇಕಾದ ಯಾವುದೇ ಯೋಜನೆಗೆ ಬಳಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ. ಶೀಘ್ರದಲ್ಲೇ ನಾನು ದೇಶದ ನಿರ್ವಸಿತರಿಗಾಗಿ ಮನೆಗಳನ್ನು ನಿರ್ಮಿಸಿಕೊಡುವ ಪ್ರಸ್ತಾವನೆಯನ್ನು ಚೀನಾದ ರಾಯಬಾರಿಗೆ ಹಸ್ತಾಂತರಿಸಲಿದ್ದೇನೆ ಎಂದು ಸಿರಿಸೇನಾ ತಿಳಿಸಿದ್ದಾರೆ. ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸ ಅವರ ಚುನವಣಾ ಅಭಿಯಾನಕ್ಕೆ ಹಣ ಪೂರೈಸಿದ ವಿರುದ್ಧ ಟೀಕೆಗಳನ್ನು ಎದುರಿಸುತ್ತಿರುವ ಚೀನಾ ಇದೀಗ ಲಂಕಾಗೆ ಬೃಹತ್ ಮೊತ್ತದ ಅನುದಾನ ಬಿಡುಗಡೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News