ಅಮೆಝಾನ್ ಕಾಡಿನಲ್ಲಿ ಒಂಟಿಯಾಗಿ ಬದುಕುತ್ತಿರುವ ಮನುಷ್ಯ ಪತ್ತೆ!: ವಿಡಿಯೋ ವೈರಲ್

Update: 2018-07-22 17:04 GMT

ಸಾವೊಪಾವ್ಲೊ, ಜು.22: ಕಳೆದ 22 ವರ್ಷಗಳಿಂದ ಅಮೆಝಾನ್ ಕಾಡಿನೊಳಗೆ ಒಂಟಿಯಾಗಿ ಬದುಕುತ್ತಿದ್ದಾನೆ ಎಂದು ಶಂಕಿಸಲಾದ ವ್ಯಕ್ತಿಯೊಬ್ಬನ ವಿಡಿಯೋವೊಂದು ವೈರಲ್ ಆಗುತ್ತಿದೆ.

ಈತ ಯಾರು?, ಈತನ ಹೆಸರೇನು?, ಯಾವ ಜನಾಂಗದವನು ಎಂಬುದು ಯಾರೊಬ್ಬರಿಗೂ ತಿಳಿದಿಲ್ಲ. ಹೊರಜಗತ್ತಿಗೆ ಸಂಪೂರ್ಣ ಅಪರಿಚಿತನಾಗಿ ಒಂಟಿಯಾಗಿ ಆತ ಬದುಕುತ್ತಿದ್ದಾನೆ.

ಬ್ರೆಝಿಲ್‍ನ ಅಮೆಝಾನ್ ಮಳೆ ಕಾಡುಗಳ ಜನಾಂಗವೊಂದಕ್ಕೆ ಈತ ಸೇರಿರಬಹುದು ಎನ್ನಲಾಗಿದೆ. ಈತನ ಕುರಿತು ಮಾಹಿತಿ ಸಂಗ್ರಹಿಸುತ್ತಿರುವ ಬ್ರೆಝಿಲ್‍ನ ಇಂಡಿಯನ್ ಫೌಂಡೇಶನ್ ಈಗ ಈ ಮನುಷ್ಯನ ವಿಡಿಯೋವನ್ನು ಬಿಡುಗಡೆ ಮಾಡಿದೆ. 1996ರಿಂದ ಈ ಸಂಘಟನೆ ಈತನ ಮೇಲೆ ನಿಗಾಯಿರಿಸಿದೆ.

2018 ಮೇ ತಿಂಗಳಲ್ಲಿ ಈ ಮನುಷ್ಯನನ್ನು ಕಾಡಿನಲ್ಲಿ ಕಂಡಿದ್ದೇವೆ ಎಂದು ಸಂಘಟನೆ ಬಹಿರಂಗಪಡಿಸಿತ್ತು. ಈತನ ಜನಾಂಗಕ್ಕೆ ಸೇರಿದ ಬೇರೆ ಯಾರನ್ನೂ ಯಾರೂ ನೋಡಿಲ್ಲ. ಈ ಜನಾಂಗದ 'ಕೊನೆಯ ಮನುಷ್ಯ' ಎಂದು ಭಾವಿಸಲಾಗುತ್ತಿದೆ. ಕಾಡಿನ ಸಂಪತ್ತನ್ನು ಕಬಳಿಸಲು ಹೊರಗಿನಿಂದ ಬರುವವರು ಈತನ ಗುಂಪಿನ ಇತರರನ್ನು ಕೊಂದಿರಬಹುದು ಎಂದು ಇಂಡಿಯನ್ ಫೌಂಡೇಶನ್ ಅಧಿಕಾರಿಗಳು ಹೇಳುತ್ತಾರೆ.

ಹೊರಗಿನ ಮನುಷ್ಯರ ಹಸ್ತಕ್ಷೇಪದಿಂದಾಗಿ ಅಮೆಝಾನ್ ಕಾಡಿನೊಳಗಿನ ಹಲವಾರು ಜನಾಂಗಗಳು ಬೆದರಿಕೆ ಎದುರಿಸುತ್ತಿವೆ. ಜಮೀನು ಮತ್ತು ಕಾಡಿನ ಸಂಪತ್ತಿಗಾಗಿ ಬರುವ ಆಧುನಿಕ ಮನುಷ್ಯರು ಇವರನ್ನು ಕೊಲ್ಲುತ್ತಿದ್ದಾರೆ. ಕಳೆದ ವರ್ಷ ಇಂತಹ 71 ಮಂದಿ ಕೊಲ್ಲಲ್ಪಟ್ಟಿದ್ದರು ಎಂದು ಬ್ರೆಝಿಲ್ ಅಧಿಕಾರಿಗಳು ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News