ವಿಯೆಟ್ನಾಂ ಓಪನ್: ಅಜಯ್ ಜಯರಾಮ್ ಫೈನಲ್‌ಗೆ
ಹೊ ಚಿ ಮಿನ್ ಸಿಟಿ, ಆ.11: ಭಾರತದ ಅಜಯ್ ಜಯರಾಮ್ ವಿಯೆಟ್ನಾಂ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಫೈನಲ್ ತಲುಪಿದರು.
ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಅಜಯ್ ಜಯರಾಮ್ ಅವರು ಜಪಾನ್‌ನ ಏಳನೇ ಶ್ರೇಯಾಂಕದ ಯು ಇಗರಾಶಿ ವಿರುದ್ಧ 21-14, 21-19 ಅಂತರದಲ್ಲಿ ಜಯ ದಾಖಲಿಸಿ ಪ್ರಶಸ್ತಿಯ ಸುತ್ತು ತಲುಪಿದರು.
34 ನಿಮಿಷಗಳ ಹಣಾಹಣಿಯಲ್ಲಿ ಅಜಯ್ ಜಯರಾಮ್ ಅವರು ಇಗರಾಶಿಗೆ ಸೋಲುಣಿಸಿದರು.
ಜಯರಾಮ್ ಅವರು ಫೈನಲ್‌ನಲ್ಲಿ ಇಂಡೋನೆಷ್ಯಾದ ನಂ.79 ಶ್ರೇಯಾಂಕದ ಶೇಸರ್ ಹಿರೆನ್ ರುಸ್ಟಾವಿಟೊ ಸವಾಲನ್ನು ಎದುರಿಸಲಿರುವರು.
4 ಬಾರಿ ಇಂಡೋನೆಷ್ಯಾ ಇಂಟರ್‌ನ್ಯಾಶನಲ್ ಟೂರ್ನಮೆಂಟ್ ಚಾಂಪಿಯನ್ ಆಗಿರುವ ಶೇಸರ್ ಸೆಮಿಫೈನಲ್‌ನಲ್ಲಿ ಭಾರತದ ಮಿಥುನ್ ಮಂಜುನಾಥ್‌ರನ್ನು 21-17, 19-21, 21-14 ಅಂತರದಲ್ಲಿ ಮಣಿಸಿ ಫೈನಲ್ ಪ್ರವೇಶಿಸಿದ್ದಾರೆ.
ಕಳೆದ ರವಿವಾರ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪಡೆದ ಭಾರತದ ಪಿ.ವಿ.ಸಿಂಧು ಅವರು ಚೀನಾದ ನಾಂಜಿಂಗ್‌ನಲ್ಲಿ ನಡೆದ ವಿಶ್ವ ಚಾಂಪಿಯನ್ ಟೂರ್ನಮೆಂಟ್‌ನಲ್ಲಿ ಸ್ಪೇನ್‌ನ ಕರೋಲಿನಾ ಮರಿನ್ ವಿರುದ್ಧ ಸೋತು ಬೆಳ್ಳಿ ಪಡೆದಿದ್ದರು.
ರಶ್ಯಾ ಓಪನ್‌ನಲ್ಲಿ ಭಾರತದ ಸೌರಭ್ ವರ್ಮಾ ಅವರು ಪುರುಷರ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು.