ರಾಷ್ಟ್ರೀಯತೆ ಪ್ರಶ್ನಿಸಿದ ಅಭಿಮಾನಿಗೆ ತಕ್ಕ ಉತ್ತರ ನೀಡಿದ ಸಾನಿಯಾ ಮಿರ್ಝಾ

Update: 2018-08-14 17:18 GMT

ಹೊಸದಿಲ್ಲಿ, ಆ.14: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ ಪಾಕಿಸ್ತಾನ ಕ್ರಿಕೆಟಿಗ ಶುಐಬ್ ಮಲಿಕ್‌ರನ್ನು ವಿವಾಹದ ಬಳಿಕ ನಿರಂತರವಾಗಿ ಸಾನಿಯಾ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅವರ ರಾಷ್ಟ್ರೀಯತೆಯ ಬಗ್ಗೆ ಪ್ರಶ್ನಿಸುತ್ತಾ ಬಂದಿದ್ದಾರೆ. ನಿಮಗೆ ಇಂದು(ಮಂಗಳವಾರ)ಸ್ವಾತಂತ್ರ ಲಭಿಸಿದೆಯೇ? ಎಂಬ ಅಭಿಮಾನಿಯೊಬ್ಬನ ಪ್ರಶ್ನೆಗೆ 31ರ ಹರೆಯದ ಸಾನಿಯಾ ತಕ್ಕ ಉತ್ತರ ನೀಡಿ ಬಾಯಿ ಮುಚ್ಚಿಸಿದ್ದಾರೆ.

ರೊಮಿಯೊ ಹೆಸರಿನ ಸಾನಿಯಾ ಫಾಲೋವರ್ಸ್ ಓರ್ವ, ‘‘ಸಾನಿಯಾ ಮಿರ್ಝಾಗೆ ಸ್ವಾತಂತ್ರ ದಿನಾಚರಣೆಯ ಶುಭಾಶಯಗಳು..ನಿಮ್ಮ ಸ್ವಾತಂತ್ರ ದಿನಾಚರಣೆ ಇವತ್ತಲ್ಲವೇ? ಎಂದು ಟ್ವೀಟ್ ಮಾಡಿದ್ದರು.

ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಸಾನಿಯಾ,‘‘ಅಲ್ಲ, ನನ್ನ ಹಾಗೂ ನನ್ನ ದೇಶದ ಸ್ವಾತಂತ್ರೋತ್ಸವ ನಾಳೆ. ನನ್ನ ಪತಿ ಹಾಗೂ ಅವರ ದೇಶದ (ಪಾಕಿಸ್ತಾನ)ಸ್ವಾತಂತ್ರ ದಿನ ಇಂದು. ನಿಮ್ಮ ಗೊಂದಲ ನಿವಾರಣೆಯಾಗಿದೆ ಎಂಬ ವಿಶ್ವಾಸ ನನ್ನದು. ಅಂದಹಾಗೆ ನೀವು ಯಾವಾಗ ಸ್ವಾತಂತ್ರೋತ್ಸವ ಆಚರಿಸುತ್ತೀರಿ?. ನೀವು ತುಂಬಾ ಗೊಂದಲದಲ್ಲಿ ಇದ್ದಂತಿದೆ’’ ಎಂದು ಟ್ವೀಟ್ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News