ಏಶ್ಯನ್ ಗೇಮ್ಸ್‌ಗಾಗಿ ಇಂಡೋನೇಶ್ಯ ಪೊಲೀಸರಿಂದ ಹಲವರ ಹತ್ಯೆ

Update: 2018-08-17 18:20 GMT

ಜಕಾರ್ತ (ಇಂಡೋನೇಶ್ಯ), ಆ. 17: ಏಶ್ಯನ್ ಗೇಮ್ಸ್‌ಗೆ ಪೂರ್ವಭಾವಿಯಾಗಿ ಪುಡಿ ಕ್ರಿಮಿನಲ್‌ಗಳ ವಿರುದ್ಧ ದಮನ ಕಾರ್ಯಾಚರಣೆ ನಡೆಸುತ್ತಿರುವ ಇಂಡೋನೇಶ್ಯ ಪೊಲೀಸರು, ಹಲವು ಡಝನ್ ಜನರನ್ನು ಕೊಂದಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾನವಹಕ್ಕುಗಳ ಸಂಸ್ಥೆ ‘ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್’ ಆರೋಪಿಸಿದೆ.

ಈ ದಮನ ಕಾರ್ಯಾಚರಣೆ ‘ಅತಿಯಾಗಿದೆ ಹಾಗೂ ಅನಾವಶ್ಯಕ’ ಎಂದು ಅದು ಹೇಳಿದೆ.

ಈ ವರ್ಷದ ಜನವರಿಯಿಂದ ಆಗಸ್ಟ್‌ವರೆಗಿನ ಅವಧಿಯಲ್ಲಿ ಪೊಲೀಸರು ನಡೆಸಿರುವ 31 ಮಂದಿಯ ಹತ್ಯೆಯು ಏಶ್ಯನ್ ಗೇಮ್ಸ್‌ನೊಂದಿಗೆ ನೇರ ಸಂಪರ್ಕ ಹೊಂದಿದೆ ಎಂದು ಅದು ತಿಳಿಸಿದೆ.

ಏಶ್ಯನ್ ಗೇಮ್ಸ್ ಜಕಾರ್ತ ಮತ್ತ4ಉ ಪಾಲೆಂಬಂಗ್ ನಗರಗಳಲ್ಲಿ ಶನಿವಾರ ಆರಂಭಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News