ಸಿಮೋನಾ ಹಾಲೆಪ್- ಬರ್ಟನ್ಸ್ ಫೆನಲ್‌ಗೆ

Update: 2018-08-19 18:26 GMT

ವಾಶಿಂಗ್ಟನ್, ಆ.19: ಸಿನ್ಸಿನಾಟಿ ಟೆನಿಸ್ ಟೂರ್ನಿಯಲ್ಲಿ ಸತತ ಎರಡನೇ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ವಿಶ್ವದ ಅಗ್ರಶ್ರೇಯಾಂಕದ ಆಟಗಾರ್ತಿ ರೊಮೇನಿಯಾದ ಸಿಮೋನಾ ಹಾಲೆಪ್ ಮತ್ತು ವಿಶ್ವದ 17ನೇ ಶ್ರೇಯಾಂಕಿತ ಆಟಗಾರ್ತಿ ಹಾಲೆಂಡ್‌ನಕಿಕಿ ಬರ್ಟನ್ಸ್ ಫೈನಲ್‌ನಲ್ಲಿ ಸೆಣಸಲಿದ್ದಾರೆ.

ಹಾಲೆಪ್ ಸೆಮಿಫೈನಲ್‌ನಲ್ಲಿ ಬೆಲರೂಸ್‌ನ ಅರೀನ ಸಬಲೆಂಕ ಎದುರು 6-3, 6-4 ನೇರ ಸೆಟ್‌ಗಳಲ್ಲಿ ಗೆದ್ದರೆ, ಎರಡನೇ ಸೆಮಿಫೈನಲ್‌ನಲ್ಲಿ ಕಿಕಿ ಬರ್ಟೆನ್ ಝೆಕೊಸ್ಲಾವಾಕಿಯಾದ ಪೆಟ್ರಾ ಕ್ವಿಟೋವಾ ಎದುರು 3-6, 6-4, 6-2ರಲ್ಲಿ ಜಯ ಸಾಧಿಸಿದರು. 2015 ಮತ್ತು 2017ರಲ್ಲಿ ಸಿನ್ಸಿನಾಟಿ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದ ಹಾಲೆಪ್ ಈ ಬಾರಿಯ ಸೆಮಿಫೈನಲ್ ಗೆಲುವಿನೊಂದಿಗೆ ತಮ್ಮ ವೃತ್ತಿ ಜೀವನದ 450ನೇ ಗೆಲುವು ಪಡೆದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News