ಏಶ್ಯನ್ ಗೇಮ್ಸ್: ಕುಸ್ತಿತಾರೆ ವಿನೇಶ್ ಪೋಗಟ್‌ಗೆ ಐತಿಹಾಸಿಕ ಚಿನ್ನ

Update: 2018-08-20 12:43 GMT

ಪಾಲೆಂಬಾಂಗ್, ಆ.20: ಭಾರತದ ಕುಸ್ತಿತಾರೆ ವಿನೇಶ್ ಪೋಗಟ್ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

 ವಿನೇಶ್ 50 ಕೆಜಿ ತೂಕ ವಿಭಾಗದ ಫ್ರೀಸ್ಟೈಲ್ ಫೈನಲ್ ಪಂದ್ಯದಲ್ಲಿ ಜಪಾನ್‌ನ ಯೂಕಿ ಐರಿ ಅವರನ್ನು 6-2 ಅಂತರದಿಂದ ಮಣಿಸುವ ಮೂಲಕ ಚಿನ್ನ ಗೆದ್ದುಕೊಂಡರು. ವಿನೇಶ್ ಕುಸ್ತಿಯಲ್ಲಿ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ವಿನೇಶ್ ಮೊದಲ ಸುತ್ತಿನಲ್ಲಿ ನಾಲ್ಕು ಅಂಕ ಗಳಿಸಿ 4-0 ಮುನ್ನಡೆ ಪಡೆದರು. ಎರಡನೇ ಸುತ್ತಿನಲ್ಲಿ 30 ಸೆಕೆಂಡ್ ಪೆನಾಲ್ಟಿಯಲ್ಲಿ ಮತ್ತಷ್ಟು ಮುನ್ನಡೆ ಸಾಧಿಸುವ ಅವಕಾಶ ಕೈಚೆಲ್ಲಿದರು. ಆಗ ತಿರುಗೇಟು ನೀಡಿದ ಜಪಾನ್ ಆಟಗಾರ್ತಿ 2 ಅಂಕ ಗಳಿಸಿ ಹಿನ್ನಡೆ ತಗ್ಗಿಸಿದರು. ತಕ್ಷಣವೇ 2 ಅಂಕ ಗಳಿಸಿದ ಪೋಗಟ್ ಚಿನ್ನದ ಪದಕ ತನ್ನದಾಗಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News