ತಾಲಿಬಾನಿಗಳಿಂದ ಬಸ್ ಪ್ರಯಾಣಿಕರ ಅಪಹರಣ: ಸೈನಿಕರಿಂದ 149 ಮಂದಿಯ ಬಿಡುಗಡೆ

Update: 2018-08-20 16:51 GMT

ಕಾಬೂಲ್, ಆ. 20: ಕುಂಡುಝ್ ಪ್ರಾಂತದಲ್ಲಿ ತಾಲಿಬಾನ್‌ನಿಂದ ಅಪಹರಿಸಲ್ಪಟ್ಟಿದ್ದ, 149 ಮಂದಿಯನ್ನು ಅಫ್ಘಾನಿಸ್ತಾನದ ಸರಕಾರಿ ಸೈನಿಕರು ಬಿಡುಗಡೆ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆದಾಗ್ಯೂ, 21 ಮಂದಿಯನ್ನು ಭಯೋತ್ಪಾದಕರು ಈಗಲೂ ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದಾರೆ ಎಂದು ಆಂತರಿಕ ಸಚಿವಾಲಯದ ವಕ್ತಾರರೊಬ್ಬರು ತಿಳಿಸಿದರು.

ತಾಲಿಬಾನಿಗಳು ಸೋಮವಾರ ಖಾನ್ ಅಬಾದ್ ಜಿಲ್ಲೆಯಲ್ಲಿ ಸಂಚರಿಸುತ್ತಿದ್ದ ಬಸ್‌ಗಳನ್ನು ತಡೆದು ಅವುಗಳಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಅಪಹರಿಸಿದ್ದರು.

ಸರಕಾರಿ ಪಡೆಗಳು ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಈವರೆಗೆ ಕನಿಷ್ಠ 7 ತಾಲಿಬಾನಿಗಳು ಹತರಾಗಿದ್ದಾರೆ.

ಕುಂಡುಝ್ ಪ್ರಾಂತದಲ್ಲಿ ತಾಲಿಬಾನ್ ಉಗ್ರರು ಬಸ್‌ಗಳ ಮೇಲೆ ದಾಳಿ ನಡೆಸಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 100ಕ್ಕೂ ಅಧಿಕ ಮಂದಿಯನ್ನು ಒತ್ತೆಯಾಳುಗಳನ್ನಾಗಿ ತೆಗೆದುಕೊಂಡಿದ್ದಾರೆ ಎಂದು ಅಫ್ಘಾನ್ ಅಧಿಕಾರಿಗಳು ಸೋಮವಾರ ಬೆಳಗ್ಗೆ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News