ಬರೋಬ್ಬರಿ 8 ವರ್ಷಗಳ ಬಳಿಕ ತಲುಪಿದ ಅಂಚೆ ಪತ್ರಗಳು !

Update: 2018-08-20 17:15 GMT

ಜೆರಿಕೊ (ಪಶ್ಚಿಮ ದಂಡೆ), ಆ. 20: ಆಕ್ರಮಿತ ಪಶ್ಚಿಮ ದಂಡೆಯಲ್ಲಿರುವ ಫೆಲೆಸ್ತೀನಿಯರಿಗೆ 10 ಟನ್‌ಗೂ ಅಧಿಕ ಅಂಚೆ ಪತ್ರಗಳು ಮತ್ತು ಇತರ ವಸ್ತುಗಳನ್ನು ವಿಶೇಷ ಬಟವಾಡೆ ಮೂಲಕ ಶೀಘ್ರವೇ ತಲುಪಿಸಲಾಗುವುದು.

ಇವುಗಳ ಬಟವಾಡೆಯನ್ನು ಇಸ್ರೇಲ್ 8 ವರ್ಷಕ್ಕೂ ಹೆಚ್ಚು ಅವಧಿಯಲ್ಲಿ ತಡೆಹಿಡಿದಿತ್ತು.

ನೆರೆಯ ಜೋರ್ಡಾನ್‌ನಿಂದ ಅಂಚೆ ಪತ್ರಗಳು ಮತ್ತು ಪ್ಯಾಕೇಜ್‌ಗಳ ರವಾನೆಗೆ ಇಸ್ರೇಲ್ ಅಧಿಕಾರಿಗಳು ಅನುಮೋದನೆ ನೀಡಿದ ಬಳಿಕ, ಕಳೆದ ಹಲವಾರು ದಿನಗಳಲ್ಲಿ ಪಶ್ಚಿಮ ದಂಡೆಯ ಜೆರಿಕೊ ನಗರದಲ್ಲಿ ಸಾವಿರಾರು ಗೋಣಿ ಪತ್ರಗಳನ್ನು ಅಂಚೆ ಸಿಬ್ಬಂದಿ ವಿಂಗಡಿಸುತ್ತಿದ್ದಾರೆ.

ಪಶ್ಚಿಮ ದಂಡೆಯಲ್ಲಿರುವ ಫೆಲೆಸ್ತೀನ್ ಪ್ರಾಧಿಕಾರಕ್ಕೆ ಪತ್ರಗಳ ನೇರ ಹಸ್ತಾಂತರಕ್ಕೆ ಇಸ್ರೇಲ್ ಅನುಮೋದನೆ ನೀಡದ ಹಿನ್ನೆಲೆಯಲ್ಲಿ, 2010ರಿಂದ ಪತ್ರಗಳು ಮತ್ತು ಇತರ ಅಂಚೆ ಪ್ಯಾಕೇಜ್‌ಗಳು ಜೋರ್ಡಾನ್‌ನಲ್ಲೇ ಬಾಕಿಯಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News