ಪಾಕ್: 21 ಸದಸ್ಯರ ಸಚಿವ ಸಂಪುಟ ಅಸ್ತಿತ್ವಕ್ಕೆ

Update: 2018-08-20 17:16 GMT

ಇಸ್ಲಾಮಾಬಾದ್, ಆ. 20: ಪಾಕಿಸ್ತಾನದಲ್ಲಿ 21 ಸದಸ್ಯರ ಸಚಿವ ಸಂಪುಟ ಸೋಮವಾರ ಪ್ರಮಾಣವಚನ ಸ್ವೀಕರಿಸಿದೆ.

ಅಧ್ಯಕ್ಷ ಮಮ್ನೂನ್ ಹುಸೈನ್ 16 ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ಇದಕ್ಕೆ ಹೊರತಾಗಿ ಇಮ್ರಾನ್ ತನ್ನ ಸಚಿವ ಸಂಪುಟಕ್ಕೆ ಐವರು ಸಲಹೆಗಾರರನ್ನೂ ನೇಮಿಸಿದ್ದಾರೆ.

ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಶನಿವಾರ ದೇಶದ 22ನೇ ಪ್ರಧಾನಿಯಾಗಿ ಪ್ರಮಾನವಚನ ಸ್ವೀಕರಿಸಿದ್ದರು.

ಶಾ ಮಹ್ಮೂದ್ ಕುರೇಶಿಯನ್ನು ವಿದೇಶ ಸಚಿವರಾಗಿ ನೇಮಿಸಲಾಗಿದೆ.

ವಿದೇಶಿ ನೀತಿಯ ಸವಾಲುಗಳ ಬಗ್ಗೆ ತನಗೆ ಅರಿವಿದೆ ಎಂದು ಪ್ರಮಾಣವಚನ ಸ್ವೀಕಾರ ಬಳಿಕ ಮಾತನಾಡಿದ ಅವರು ಹೇಳಿದರು.

ಪಾಕಿಸ್ತಾನದ ವಿದೇಶ ನೀತಿಯನ್ನು ಪರಿಷ್ಕರಿಸಲಾಗುವುದು ಹಾಗೂ ಪಾಕಿಸ್ತಾನದ ಹಿತದೃಷ್ಟಿಯಿಂದ ಅದನ್ನು ಸರಿಯಾದ ಮಾರ್ಗದಲ್ಲಿ ಇರಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News