ಏಶ್ಯನ್ ಗೇಮ್ಸ್: ಯುವ ಶೂಟರ್ ಶಾರ್ದೂಲ್‌ಗೆ ಬೆಳ್ಳಿ
Update: 2018-08-23 15:09 IST
ಜಕಾರ್ತ, ಆ.23: ಭಾರತದ ಯುವ ಶೂಟರ್ ಶಾರ್ದೂಲ್ ವಿಹಾನ್ ಏಶ್ಯನ್ ಗೇಮ್ಸ್‌ನ ಪುರುಷರ ಡಬಲ್ ಟ್ರಾಪ್ ಇವೆಂಟ್‌ನಲ್ಲಿ ಕೇವಲ ಒಂದು ಅಂಕದಿಂದ ಚಿನ್ನ ವಂಚಿತರಾಗಿ ಬೆಳ್ಳಿ ಪದಕ ಜಯಿಸಿದರು. ಈ ಮೂಲಕ ಮಹತ್ವದ ಸಾಧನೆ ಮಾಡಿದರು.
ಉತ್ತರಪ್ರದೇಶದ ಮೀರತ್‌ನ 15ರ ಬಾಲಕ ಶಾರ್ದೂಲ್ ಗೇಮ್ಸ್‌ನ 5ನೇ ದಿನವಾದ ಗುರುವಾರ ನಡೆದ ಫೈನಲ್ ಸುತ್ತಿನಲ್ಲಿ ಒಟ್ಟು 73 ಅಂಕ ಗಳಿಸಿ ಎರಡನೇ ಸ್ಥಾನ ಪಡೆದರು. ಪ್ರತಿಸ್ಪರ್ಧಿ ಕೊರಿಯಾದ ಹಿಯುನ್‌ವೂ ಶಿನ್ 74 ಅಂಕ ಗಳಿಸಿ ಚಿನ್ನದ ಪದಕ ಜಯಿಸಿದರು. ಕತರ್‌ನ ಹಮದ್ ಅಲಿ ಕಂಚಿನ ಪದಕ್ಕೆ ತೃಪ್ತಿಪಟ್ಟರು.
ಭಾರತಕ್ಕೆ ಇದು ಶೂಟಿಂಗ್‌ನಲ್ಲಿ ಲಭಿಸಿರುವ 8ನೇ ಪದಕವಾಗಿದೆ. ಪ್ರಸ್ತುತ ಏಶ್ಯನ್ ಗೇಮ್ಸ್‌ನಲ್ಲಿ ಲಭಿಸಿರುವ 17ನೇ ಪದಕವಾಗಿದೆ.