×
Ad

ಏಶ್ಯನ್ ಗೇಮ್ಸ್‌ನಲ್ಲಿ ಕ್ರೀಡಾಸ್ಫೂರ್ತಿ ಮೆರೆದ ಇರಾನ್ ಆಟಗಾರ

Update: 2018-08-23 23:14 IST

ಜಕಾರ್ತ, ಆ.23: ಏಶ್ಯನ್ ಗೇಮ್ಸ್‌ನ ವುಶು ಸ್ಪರ್ಧೆಯಲ್ಲಿ ಪುರುಷರ ಸ್ಯಾಂಡಾ 60 ಕೆಜಿ ಸೆಮಿ ಫೈನಲ್‌ನಲ್ಲಿ ಗಾಯಗೊಂಡಿದ್ದ ಭಾರತದ ಅಥ್ಲೀಟ್‌ಗೆ ಸಹಾಯಹಸ್ತ ಚಾಚಿದ ಇರಾನ್ ಆಟಗಾರ ಕ್ರೀಡಾಸ್ಫೂರ್ತಿ ಮೆರೆದರು.

 ಸೆಮಿ ಫೈನಲ್ ಪಂದ್ಯ ನಡೆಯುವಾಗಲೇ ಭಾರತದ ಸೂರ್ಯ ಭಾನು ಪ್ರತಾಪ್ ಸಿಂಗ್ ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದೇ 0-2 ರಿಂದ ಸೋತು ಫೈನಲ್‌ಗೆ ತಲುಪಲು ವಿಫಲರಾಗಿದ್ದರು. ನೋವಿನಿಂದ ನಡೆಯಲು ಸಾಧ್ಯವಾಗದೇ ಸಮಸ್ಯೆ ಎದುರಿಸಿದ್ದ ಸಿಂಗ್‌ರನ್ನು ತೋಳಿನಲ್ಲಿ ಎತ್ತಿ ಹಿಡಿದುಕೊಂಡು ಡ್ರೆಸ್ಸಿಂಗ್‌ರೂಮ್‌ನತ್ತ ಸಾಗಿದ ಇರ್ಫಾನ್ ಕ್ರೀಡಾಸ್ಫೂರ್ತಿ ಮೆರೆದರು. ಬುಧವಾರ ಇರಾನ್ ಆಟಗಾರ ಇರ್ಫಾನ್ ವಿರುದ್ಧ ಸೋತಿದ್ದ ಭಾರತದ ಸೂರ್ಯ ಭಾನು ಪ್ರತಾಪ್ ಸಿಂಗ್ ಕಂಚಿನ ಪದಕ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News