×
Ad

ಟೆನಿಸ್ ಆಟಗಾರ ಪ್ರಜ್ಞೇಶ್‌ಗೆ 20 ಲಕ್ಷ ರೂ.ಬಹುಮಾನ

Update: 2018-08-25 23:58 IST

ಚೆನ್ನೈ,ಆ.25: ಏಶ್ಯನ್ ಗೇಮ್ಸ್‌ನಲ್ಲಿ ಟೆನಿಸ್ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದ ಪ್ರಜ್ಞೇಶ್ ಗುಣೇಶ್ವರನ್‌ಗೆ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಶನಿವಾರ 20 ಲಕ್ಷ ರೂ.ಬಹುಮಾನ ಘೋಷಿಸಿದ್ದಾರೆ. ತಮಿಳುನಾಡಿನ ಜನತೆಯ ಪರವಾಗಿ ಪ್ರಜ್ಞೇಶ್‌ಗೆ ಅಭಿನಂದನೆ ಸಲ್ಲಿಸುವೆ. ಈ ಸಾಧನೆಗಾಗಿ ಅವರಿಗೆ ಸರಕಾರದ ವತಿಯಿಂದ 20 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಪಳನಿಸ್ವಾಮಿ ಹೇಳಿದ್ದಾರೆ. ಪುರುಷರ ಸಿಂಗಲ್ಸ್‌ನ ಸೆಮಿ ಫೈನಲ್‌ನಲ್ಲಿ ಉಝ್ಬೇಕಿಸ್ತಾನದ ಡೆನಿಸ್ ಇಸ್ಟೊಮಿನ್ ವಿರುದ್ಧ 2-6, 2-6 ಅಂತರದಿಂದ ಸೋತಿದ್ದ ತಮಿಳುನಾಡಿನ ಆಟಗಾರ ಪ್ರಜ್ಞೇಶ್ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News