ವೀಡಿಯೊಗೇಮ್ ಪಂದ್ಯಾವಳಿಯಲ್ಲಿ ಗುಂಡಿನ ದಾಳಿ: 2 ಸಾವು

Update: 2018-08-27 17:48 GMT

 ಟ್ಯಾಲಹ್ಯಾಸಿ (ಫ್ಲೋರಿಡ), ಆ. 27: ಅಮೆರಿಕದ ಫ್ಲೋರಿಡ ರಾಜ್ಯದ ಜಾಕ್ಸನ್‌ವಿಲ್ ನಗರದಲ್ಲಿ ನಡೆಯುತ್ತಿದ್ದ ವೀಡಿಯೊಗೇಮ್ ಪಂದ್ಯಾವಳಿಯೊಂದರಲ್ಲಿ ಸ್ಪರ್ಧಿಯೊಬ್ಬ ರವಿವಾರ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಹಾಗೂ 11 ಮಂದಿ ಗಾಯಗೊಂಡಿದ್ದಾರೆ.

ಅಂತಿಮವಾಗಿ ದಾಳಿಕೋರನು ತನ್ನ ಮೇಲೆಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡನು.

 ‘ಮ್ಯಾಡನ್ 19 ಅಮೆರಿಕನ್ ಫುಟ್ಬಾಲ್ ಇಸ್ಪೋರ್ಟ್ಸ್ ಟೂರ್ನಮೆಂಟ್’ನಲ್ಲಿ ನಡೆದ ಗುಂಡಿನ ದಾಳಿಯ ಆರೋಪಿಯನ್ನು ಬಾಲ್ಟಿಮೋರ್ ನಿವಾಸಿ 24 ವರ್ಷದ ಡೇವಿಡ್ ಕಟ್ಝ್ ಎಂಬುದಾಗಿ ನಗರದ ಶರೀಫ್ ಮೈಕ್ ವಿಲಿಯಮ್ಸ್ ಗುರುತಿಸಿದ್ದಾರೆ.

‘‘ಸ್ಥಳದಲ್ಲಿ ಮೂವರ ಮೃತದೇಹಗಳು ಪತ್ತೆಯಾಗಿವೆ. ಅವುಗಳ ಪೈಕಿ ಒಂದು ದಾಳಿಕೋರನದ್ದು. ಅವನು ತನ್ನ ಮೇಲೆಯೇ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡನು’’ ಎಂದು ವಿಲಿಯಮ್ಸ್ ತಿಳಿಸಿದರು.

ಒಂಬತ್ತು ಸಂತ್ರಸ್ತರನ್ನು ಸ್ಥಳೀಯ ಆಸ್ಪತ್ರೆಗಳಿಗೆ ಸೇರಿಸಲಾಗಿದೆ.

ಅಲ್ಲಿ ನಡೆಯುತ್ತಿದ್ದ ಇ-ಸ್ಪೋರ್ಟ್ಸ್ ಪಂದ್ಯಾವಳಿಯಲ್ಲಿ ಕಟ್ಝ್ ಓರ್ವ ಸ್ಪರ್ಧಾಳುವಾಗಿದ್ದನು ಎಂದು ವಿಲಿಯಮ್ಸ್ ಹೇಳಿದರು.

‘ಮ್ಯಾಡನ್’ ನ್ಯಾಶನಲ್ ಫುಟ್ಬಾಲ್ ಲೀಗ್ ಮಾದರಿಯಲ್ಲಿ ನಡೆಯುವ ಅತ್ಯಂತ ಜನಪ್ರಿಯ ಮಲ್ಟಿ ಪ್ಲೇಯರ್ ವೀಡಿಯೊ ಗೇಮ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News