ಮ್ಯಾನ್ಮಾರ್‌ ಸೇನಾಧಿಕಾರಿಗಳ ಪೇಜ್ ರದ್ದುಗೊಳಿಸಿದ ಫೇಸ್‌ಬುಕ್

Update: 2018-08-27 17:13 GMT

ಯಾಂಗನ್ (ಮ್ಯಾನ್ಮಾರ್), ಆ. 27: ಮ್ಯಾನ್ಮಾರ್‌ನ ಮುಸ್ಲಿಮ್ ರೊಹಿಂಗ್ಯಾ ಅಲ್ಪಸಂಖ್ಯಾತರ ವಿರುದ್ಧ ದೇಶದ ಸಶಸ್ತ್ರ ಪಡೆಗಳು ಯುದ್ಧಾಪರಾಧಗಳನ್ನು ನಡೆಸಿವೆ ಎಂಬುದಾಗಿ ವಿಶ್ವಸಂಸ್ಥೆಯ ನೂತನ ವರದಿಯೊಂದು ಆರೋಪಿಸಿದ ಬಳಿಕ, ಆ ದೇಶದ ಹಿರಿಯ ಸೇನಾಧಿಕಾರಿಗಳಿಗೆ ಸಂಬಂಧಿಸಿದ ಫೇಸ್‌ಬುಕ್ ಪುಟಗಳನ್ನು ಫೇಸ್‌ಬುಕ್ ಇಂಕ್ ವಜಾಗೊಳಿಸಿದೆ.

ಸುಮಾರು 1.2 ಕೋಟಿ ಜನರು ‘ಫಾಲೋ’ ಮಾಡುತ್ತಿದ್ದ 18 ಫೇಸ್‌ಬುಕ್ ಖಾತೆಗಳು, ಒಂದು ಇನ್‌ಸ್ಟಾಗ್ರಾಮ್ ಖಾತೆ ಮತ್ತು 52 ಫೇಸ್‌ಬುಕ್ ಪುಟಗಳನ್ನು ಫೇಸ್‌ಬುಕ್ ಸೋಮವಾರ ವಜಾಗೊಳಿಸಿದೆ ಎಂದು ಬ್ಲಾಗ್‌ಪೋಸ್ಟೊಂದರಲ್ಲಿ ಕಂಪೆನಿ ತಿಳಿಸಿದೆ.

‘‘ಇನ್ನಷ್ಟು ಜನಾಂಗೀಯ ಮತ್ತು ಧಾರ್ಮಿಕ ಉದ್ವಿಗ್ನತೆಗಳನ್ನು ಸೃಷ್ಟಿಸಲು ನಮ್ಮ ಸೇವೆಗಳನ್ನು ಬಳಸುವುದನ್ನು ತಡೆಯಲು ನಾವು ಈ ಕ್ರಮ ತೆಗೆದುಕೊಂಡಿದ್ದೇವೆ’’ ಎಂದು ಫೇಸ್‌ಬುಕ್ ಸೋಮವಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News