ರಾಷ್ಟ್ರಗೀತೆ ಹಾಡುವಾಗ ಭಾವುಕರಾಗಿ ಕಣ್ಣೀರಿಟ್ಟ ಅಮಿತ್ ಪಾಂಘಲ್

Update: 2018-09-01 17:35 GMT

ಜಕಾರ್ತ, ಸೆ.1: ಈ ಬಾರಿಯ ಏಶ್ಯನ್ ಗೇಮ್ಸ್ ನಲ್ಲಿ ಭಾರತದ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಭಾರತದ ಪಾಲಿಗೆ ದಾಖಲೆ ಸಂಖ್ಯೆಯ ಅಂದರೆ 66ನೇ ಪದಕವನ್ನು ಗೆದ್ದುಕೊಟ್ಟವರು ಬಾಕ್ಸರ್ ಅಮಿತ್ ಪಾಂಘಲ್.

ರಿಯೋ ಒಲಿಂಪಿಕ್ಸ್ ಚಾಂಪಿಯನ್ ಹಸನ್‍ ಬಾಯ್ ರನ್ನು ಫೈನಲ್‍ನಲ್ಲಿ ಮಣ್ಣುಮುಕ್ಕಿಸುವ ಮೂಲಕ ಅಮಿತ್ ಚಿನ್ನ ಗೆದ್ದರು. ರೋಚಕ ಹೋರಾಟದಲ್ಲಿ ಭಾರತೀಯ ಬಾಕ್ಸರ್ ಪರವಾಗಿ 3-2 ಅಂತರದ ತೀರ್ಪು ಬಂತು.

ಒಲಿಂಪಿಕ್ ಚಾಂಪಿಯನ್ ವಿರುದ್ಧ ಜಯ ಸಾಧಿಸಲು ತಮ್ಮ ಎಲ್ಲ ತಂತ್ರಗಾರಿಕೆಯನ್ನು ಅಮಿತ್ ಪ್ರದರ್ಶಿಸಿದರು. ಪದಕ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಗೀತೆ ಹಾಡುವ ವೇಳೆ ಅಮಿತ್ ಭಾವುಕರಾದರು. ಭಾರತದ ತ್ರಿವರ್ಣ ಧ್ವಜ ಮೇಲೇರಿ, ರಾಷ್ಟ್ರಗೀತೆ ಮೊಳಗುವಾಗ ಅಮಿತ್‍ಗೆ ಉಕ್ಕಿ ಬರುತ್ತಿದ್ದ ಕಣ್ಣೀರು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ.
ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 22 ವರ್ಷದ ಅಮಿತ್, ಇಂಡೋನೇಷ್ಯಾ ಕೂಟದ ಬಾಕ್ಸಿಂಗ್ ಸ್ಪರ್ಧೆಗಳಲ್ಲಿ ಫೈನಲ್ ತಲುಪಿದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಪ್ರತಿಷ್ಠಿತ ಏಷ್ಯಾಡ್ ನಲ್ಲಿ ಚಿನ್ನ ಗೆದ್ದ  ಎಂಟನೇ ಬಾಕ್ಸರ್ ಎಂಬ ಹೆಗ್ಗಳಿಕೆಯೂ ಅವರದ್ದು. ಇದಕ್ಕೂ ಮುನ್ನ ಅವರು ಕಾಮನ್‍ ವೆಲ್ತ್ ಕೂಟದಲ್ಲಿ ಬೆಳ್ಳಿ, ಏಷ್ಯನ್ ಚಾಂಪಿಯನ್‍ ಶಿಪ್‍ ನಲ್ಲಿ ಕಂಚು ಗೆದ್ದಿದ್ದರು. ವಿಶ್ವ ಚಾಂಪಿಯನ್‍ ಶಿಪ್‍ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News