ಭಾರತಕ್ಕೆ ಸರಣಿ ಸೋಲು

Update: 2018-09-02 16:42 GMT

    ಸೌಥ್‌ಹ್ಯಾಂಪ್ಟನ್, ಸೆ.2: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಕ್ರಿಕೆಟ್ ಟೆಸ್ಟ್‌ನಲ್ಲಿ ಮೊಯಿನ್ ಅಲಿ ದಾಳಿಗೆ ಸಿಲುಕಿದ ಭಾರತ 60 ರನ್‌ಗಳ ಅಂತರದಲ್ಲಿ  ಸೋಲು ಅನುಭವಿಸಿದೆ.
ಇದರೊಂದಿಗೆ ಭಾರತ ಐದು ಟೆಸ್ಟ್‌ಗಳ ಸರಣಿಯನ್ನು 1-3 ಅಂತರದಲ್ಲಿ ಕಳೆದುಕೊಂಡಿದೆ.
ಎರಡನೇ ಇನಿಂಗ್ಸ್‌ನಲ್ಲಿ 245 ರನ್‌ಗಳ ಗೆಲುವಿನ  ಸವಾಲನ್ನು ಪಡೆದ ಭಾರತ 69.4 ಓವರ್‌ಗಳಲ್ಲಿ 184 ರನ್‌ಗಳಿಗೆ ಆಲೌಟಾಗಿದೆ.
   
 ಭಾರತ 22 ರನ್ ಸೇರಿಸುವಷ್ಟರಲ್ಲಿ 3ವಿಕೆಟ್‌ಗಳನ್ನು ಕಳೆದುಕೊಂಡು ಒತ್ತಡಕ್ಕೆ ಸಿಲುಕಿತ್ತು. ಬಳಿಕ ನಾಯಕ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ 4ನೇ ವಿಕೆಟ್‌ಗೆ 101 ರನ್‌ಗಳ ಜೊತೆಯಾಟ ನೀಡಿ ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರು. ಕೊಹ್ಲಿ (58) ಅರ್ಧಶತಕ ದಾಖಲಿಸಿ ನಿರ್ಗಮಿಸಿದರು. ಕೊಹ್ಲಿ ನಿರ್ಗಮನದ ಬಳಿಕ ಹಾರ್ದಿಕ್ ಪಾಂಡ್ಯ (0) ಖಾತೆ ತೆರೆಯದೆ ನಿರ್ಗಮಿಸಿದರು. ರಿಷಭ್ ಪಂತ್(18) ಎರಡಂಕೆಯ ಕೊಡುಗೆ ನೀಡಿದರು.ಅಜಿಂಕ್ಯ ರಹಾನೆ (51) ಔಟಾದ ಬಳಿಕ ಭಾರತದ ಗೆಲುವಿನ ಆಸೆ ಕ್ಷೀಣಿಸಿತು.
 ಆರಂಭಿಕ ದಾಂಡಿಗ ಲೋಕೇಶ್ ರಾಹುಲ್(0) ಮತ್ತು ಚೇತೇಶ್ವರ ಪೂಜಾರ(5) ಮತ್ತು ಶಿಖರ್ ಧವನ್ (17) , ಇಶಾಂತ್ ಶರ್ಮಾ (0) ಔಟಾದರು.
ಟೆಸ್ಟ್‌ನ ನಾಲ್ಕನೇ ದಿನವಾಗಿರುವ ರವಿವಾರ ಇಂಗ್ಲೆಂಡ್ ಎರಡನೇ ಇನಿಂಗ್ಸ್‌ನಲ್ಲಿ 96.1 ಓವರ್‌ಗಳಲ್ಲಿ 271 ರನ್‌ಗಳಿಗೆ ಆಲೌಟಾಗಿದೆ.
ಮೂರನೇ ದಿನದಾಟದಂತ್ಯಕ್ಕೆ 91.5 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 260 ರನ್ ಗಳಿಸಿತ್ತು. ಈ ಮೊತ್ತಕ್ಕೆ 11 ರನ್ ಸೇರಿಸುವಷ್ಟರಲ್ಲಿ ಆಲೌಟಾಗಿದೆ.
 ಸ್ಟುವರ್ಟ್ ಬ್ರಾಡ್(0) ಖಾತೆ ತೆರೆಯದೆ ಶಮಿಗೆ ವಿಕೆಟ್ ಒಪ್ಪಿಸಿದರು. ಸ್ಯಾಮ್ ಕರನ್ 46 ರನ್ ಗಳಿಸಿ ರನೌಟಾದರು. ಕರನ್ ಶನಿವಾರ ದಿನದಾಟದಂತ್ಯಕ್ಕೆ 37 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದರು. ಜೇಮ್ಸ್ ಆ್ಯಂಡರ್ಸನ್ ಔಟಾಗದೆ 1 ರನ್ ಗಳಿಸಿದ್ದಾರೆ.
ಭಾರತದ ಪರ ಮುಹಮ್ಮದ್ ಶಮಿ 57ಕ್ಕೆ 4, ಇಶಾಂತ್ ಶರ್ಮಾ 36ಕ್ಕೆ 2, ರವಿಚಂದ್ರನ್ ಅಶ್ವಿನ್ ಮತ್ತು ಜಸ್‌ಪ್ರೀತ್ ಬುಮ್ರಾ ತಲಾ 1 ವಿಕೆಟ್ ಪಡೆದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News