ಹ್ಯೂಗೊ ಲಾಲೋರಿಸ್‌ಗೆ ದಂಡ

Update: 2018-09-12 17:00 GMT

ಲಂಡನ್, ಸೆ.12: ವಿಶ್ವ ಕಪ್ ಜಯಿಸಿದ ಫ್ರಾನ್ಸ್ ಫುಟ್ಬಾಲ್ ತಂಡದ ನಾಯಕ ಹ್ಯೂಗೊ ಲಾಲೋರಿಸ್ ಲಂಡನ್‌ನಲ್ಲಿ ಪಾನಮತ್ತರಾಗಿ ವಾಹನ ಚಲಾಯಿಸಿದ ತಪ್ಪಿಗೆ ಭಾರೀ ದಂಡ ತೆತ್ತಿದ್ದಾರೆ.

     ಹ್ಯೂಗೊ ಲಾಲೋರಿಸ್ ಕೇಂದ್ರ ಲಂಡನ್‌ನಲ್ಲಿ ಬುಧವಾರ ವಾಹನ ಚಲಾಯಿಸಿದ ಕಾರಣಕ್ಕಾಗಿ ಅವರಿಗೆ ನ್ಯಾಯಾಧೀಶರು 65,000 ಡಾಲರ್(46.79 ಲಕ್ಷ ರೂ.) ವಿಧಿಸಿದ್ದಾರೆ. ಲಾಲೋರಿಸ್‌ಗೆ ಜೈಲುವಾಸ ತಪ್ಪಿದರೂ 20 ತಿಂಗಳುಗಳ ಕಾಲ ವಾಹನ ಚಲಾಯಿಸದಂತೆ ನಿಷೇಧ ಹೇರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News