ಏಶ್ಯಕಪ್: ಪಾಕ್ ವಿರುದ್ಧ ಹಾಂಕಾಂಗ್ 116 ರನ್‌ಗೆ ಆಲೌಟ್

Update: 2018-09-16 14:39 GMT

ದುಬೈ, ಸೆ.16: ಪಾಕಿಸ್ತಾನ ಬೌಲಿಂಗ್ ದಾಳಿಗೆ ತತ್ತರಿಸಿದ ಹಾಂಕಾಂಗ್ ತಂಡ ಏಶ್ಯಕಪ್‌ನ ಎರಡನೇ ಪಂದ್ಯದಲ್ಲಿ 116 ರನ್‌ಗೆ ಆಲೌಟಾಗಿದೆ.

ರವಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹಾಂಕಾಂಗ್ ತಂಡ ಉಸ್ಮಾನ್ ಖಾನ್(19ಕ್ಕೆ 3), ಹಸನ್ ಅಲಿ(19ಕ್ಕೆ 2) ಹಾಗೂ ಶಾದಾಬ್ ಖಾನ್(31ಕ್ಕೆ2) ದಾಳಿಗೆ ಕಂಗಾಲಾಗಿ 37.1 ಓವರ್‌ಗಳಲ್ಲಿ 116 ರನ್ ಗಳಿಸಿ ಆಲೌಟಾಗಿದೆ.

 ಹಾಂಕಾಂಗ್ ಪರ ಅಝಾಝ್ ಖಾನ್(27), ಕೆ.ಡಿ.ಶಾ(26)ಹಾಗೂ ಅಂಶುಮಾನ್ ರಾಥ್(19) ಎರಡಂಕೆಯ ಸ್ಕೋರ್ ಗಳಿಸಿದರು.

ಎರಡು ಬಾರಿಯ ಚಾಂಪಿಯನ್ ಪಾಕಿಸ್ತಾನ ಗೆಲುವಿಗೆ ಸುಲಭ ಸವಾಲು ಪಡೆದಿದ್ದು ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆಯುವ ವಿಶ್ವಾಸದಲ್ಲಿದೆ. 2004ರ ಆವೃತ್ತಿಯ ಏಶ್ಯಕಪ್‌ನಲ್ಲಿ ಭಾಗವಹಿಸಿದ್ದ ಹಾಂಕಾಂಗ್ ಇದೀಗ ಎರಡನೇ ಬಾರಿ ಟೂರ್ನಿಯಲ್ಲಿ ಕಾಣಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News